ಗಂಗಾವತಿ: ಸಮೀಪದ ಹೊಸಳ್ಳಿ ಗ್ರಾಮದಲ್ಲಿ ಸ್ನೇಹ ಬಳಗದ ಯುವಕರು ಆಯೋಜಿಸಿದ್ದ ವನಮಹೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗ್ರಾಮೀಣ ಪಿಎಸ್ಐ ದೊಡ್ಡಪ್ಪ, ಗಿಡ ನೆಡುವ ಮೂಲಕ ಯುವಕರಿಗೆ ಪ್ರೇರಣೆ ನೀಡಿದರು.
ಸಸಿ ನೆಟ್ಟು ಪರಿಸರ ರಕ್ಷಣೆ ಮಾಡಿದರೆ ಮಾತ್ರ ಮುಂದಿನ ನಮ್ಮ ಜನಾಂಗ ಶುದ್ಧ ಗಾಳಿ, ನೀರು ಸೇರಿದಂತೆ ಪ್ರಾಕೃತಿಕವಾಗಿ ನೆಮ್ಮದಿಯಿಂದ ಇರಲು ಸಾಧ್ಯ. ಮಕ್ಕಳಂತೆ ಮರಗಳನ್ನು ಪೋಷಣೆ ಮಾಡಬೇಕು ಎಂದು ಪಿಎಸ್ಐ ದೊಡ್ಡಪ್ಪ ಹೇಳಿದರು.
ನಗರಸಭಾ ಸದಸ್ಯ ಎಫ್.ರಾಘವೇಂದ್ರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬಯಲು ಸೀಮೆಯೂ ಮಲೆನಾಡಿನಂತಾಗುತ್ತಿದೆ. ಈ ಭಾಗದ ಜನರಲ್ಲಿ ಪರಿಸರದ ಬಗ್ಗೆ ಮೂಡುತ್ತಿರುವ ಜಾಗೃತಿಯೇ ಇದಕ್ಕೆ ಕಾರಣ. ಇದು ಹೀಗೆಯೇ ಮುಂದುವರೆಯಲಿ ಎಂದರು.