ಗಂಗಾವತಿ: ತಾಲ್ಲೂಕಿನ ವಿರುಪಾಪುರ ಗಡ್ಡೆಯಲ್ಲಿರುವ ಅನಧಿಕೃತ ರೆಸಾರ್ಟ್ ತೆರವಿಗೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶಕ್ಕೆ ಬೆಂಗಳೂರಿನ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಫೆ. 24ರವರೆಗೆ ಮಧ್ಯಂತರ ತಡೆ ನೀಡಿದ್ದರಿಂದ ರೆಸಾರ್ಟ್ ಮಾಲೀಕರು ತಾತ್ಕಾಲಿಕವಾಗಿ ನಿರಾಳರಾಗಿದ್ದಾರೆ.
ಒಂದು ದಶಕದಷ್ಟು ಹಳೆಯದಾದ ಈ ಪ್ರಕರಣ, ಕಳೆದ ಮೂರು ವರ್ಷದ ಹಿಂದಷ್ಟೆ ಸುಪ್ರೀಂಕೋರ್ಟ್ವರೆಗೂ ಹೋಗಿತ್ತು. ಮೂರು ವರ್ಷಗಳ ಕಾಲ ವಿಚಾರಣೆ ನಡೆಸಿದ ಕೋರ್ಟ್, ರೆಸಾರ್ಟ್ ಮಾಲೀಕರ ವಾದವನ್ನು ತಳ್ಳಿಹಾಕಿ, ಎಲ್ಲಾ ರೆಸಾರ್ಟ್ಗಳನ್ನು ತೆರವು ಮಾಡುವಂತೆ ಫೆ.11ರಂದು ಆದೇಶ ಜಾರಿ ಮಾಡಿತ್ತು.
ಆದರೆ ಸುಪ್ರಿಂಕೋರ್ಟ್ ತೀರ್ಪಿಗೆ ತಡೆ ನೀಡುವಂತೆ ಇಲ್ಲಿನ ಕೆಲ ಮಾಲೀಕರು ರಾಜ್ಯ ಹೈಕೋರ್ಟ್ ಮೊರೆ ಹೋಗಿದ್ದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಫೆ.24ರವರೆಗೆ ತೆರವು ಮಾಡದಂತೆ ಅಧಿಕಾರಿಗಳಿಗೆ ಆದೇಶ ಮಾಡಿದೆ.