ಗಂಗಾವತಿ (ಕೊಪ್ಪಳ): ಚಿರತೆಗಳ ಹಾವಳಿಯನ್ನು ತಡೆಯುವ ನಿಟ್ಟಿನಲ್ಲಿ ಆನೆಗೊಂದಿ ಭಾಗದಲ್ಲಿ ಅರಣ್ಯ ಇಲಾಖೆ ಮಾಡಿದ್ದ ಎಲ್ಲಾ ತಂತ್ರಗಾರಿಕೆ ವಿಫಲವಾಗಿದ್ದವು. ಇದೀಗ ದುರ್ಗ ಬೆಟ್ಟದಲ್ಲಿ ಎರಡು ಚಿರತೆಗಳು ಸೆರೆಯಾಗಿವೆ.
ಅರಣ್ಯ ಇಲಾಖೆ ಆನೆ ಕಾರ್ಯಾಚರಣೆ, ಸಿಸಿ ಕ್ಯಾಮರಾ ಅಳವಡಿಕೆ, ದ್ರೋಣ್ ಕ್ಯಾಮರದಂತಹ ಸಾಕಷ್ಟು ಸುಧಾರಿತ ತಂತ್ರಜ್ಞಾನ ಬಳಸಿದರೂ ಚಿರತೆಗಳು ಸೆರೆಯಾಗಿರಲಿಲ್ಲ. ಇದೀಗ ದಕ್ಷಿಣಾಯಾನ ಅಂದರೆ ಸಂಕ್ರಾಂತಿ ಹಬ್ಬಕ್ಕಿಂತಲೂ ಮುನ್ನ ಹಾಗೂ ಉತ್ತರಾಯಣಕ್ಕೊಂದು ಎಂಬಂತೆ ಎರಡು ಚಿರತೆಗಳು ಬೋನಿಗೆ ಬಿದ್ದಿವೆ.
ಓದಿ: ಎಂಇಎಸ್, ಶಿವಸೇನೆ ವಿರುದ್ಧ ಹೆಚ್ಡಿಕೆ ತೀವ್ರ ವಾಗ್ದಾಳಿ!
ಇಷ್ಟು ದಿನ ಅರಣ್ಯ ಇಲಾಖೆ ಅರಣ್ಯ ಇಲಾಖೆ ಮಾಡಿದ್ದ ಎಲ್ಲ ತಂತ್ರಗಾರಿಕೆ ವಿಫಲವಾಗಿದ್ದವು. ಆದ್ರೀಗ ಧಾರ್ಮಿಕ ಶಕ್ತಿಗಳಿಂದಲೇ ಚಿರತೆಗಳು ಸೆರೆಯಾಗಿವೆ ಎಂದು ಇಲ್ಲಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ.