ETV Bharat / state

ಕಾಶಿಯ ಗಂಗಾರತಿ ಮಾದರಿಯಲ್ಲಿ ಅಂಜನಾದ್ರಿಯಲ್ಲಿ ತುಂಗಾರತಿ; ಸ್ಥಳ ಪರಿಶೀಲಿಸಿದ ಜನಾರ್ದನ ರೆಡ್ಡಿ

ತುಂಗಭದ್ರಾ ನದಿಗೆ ಪ್ರತಿನಿತ್ಯ ಸಂಜೆ ಆರತಿ ಬೆಳಗಲು ಅಂಜನಾದ್ರಿ ಆನೆಗೊಂದಿ ಸುತ್ತಲಿನ ಪ್ರದೇಶಗಳಲ್ಲಿ ಸೂಕ್ತ ಸ್ಥಳಗಳ ಹುಡುಕಾಟ ನಡೆಯುತ್ತಿದೆ.

MLA Janardhana Reddy inspected the place
ಶಾಸಕ ಜನಾರ್ದನ ರೆಡ್ಡಿ ಅವರು ಆರತಿ ಮಾಡುವ ವಿಧಾನಕ್ಕೆ ಸ್ಥಳಗಳನ್ನು ಪರಿಶೀಲಿಸಿದರು
author img

By ETV Bharat Karnataka Team

Published : Dec 20, 2023, 6:59 PM IST

ಗಂಗಾವತಿ(ಕೊಪ್ಪಳ): ಉತ್ತರ ಭಾರತದ ಕಾಶಿಯಲ್ಲಿ ಗಂಗಾ ನದಿಗೆ ನಡೆಯುವ ಗಂಗಾರತಿ ಮಾದರಿಯಲ್ಲಿ ಅಂಜನಾದ್ರಿಯಲ್ಲಿ ತುಂಗಭದ್ರಾ ನದಿಗೆ ತುಂಗಾರತಿ ಬೆಳಗುವ ಉದ್ದೇಶವಿದ್ದು, ಇದಕ್ಕಾಗಿ ಯೋಜನೆ ರೂಪಿಸಲಾಗುತ್ತಿದೆ ಎಂದು ಶಾಸಕ ಜಿ.ಜನಾರ್ದನ ರೆಡ್ಡಿ ಹೇಳಿದರು.

ತುಂಗಭದ್ರಾ ನದಿಗೆ ಪ್ರತಿನಿತ್ಯ ಸಂಜೆ ಆರತಿಯ ಮೂಲಕ ನಮಿಸುವ ಕಾರ್ಯಕ್ರಮ ಅನುಷ್ಠಾನಗೊಳಿಸಲು ಅಂಜನಾದ್ರಿ-ಆನೆಗೊಂದಿ ಸುತ್ತಲಿನ ಪರಿಸರದಲ್ಲಿ ಬುಧವಾರ ಸಂಚರಿಸಿದ ಜನಾರ್ದನ ರೆಡ್ಡಿ ಸೂಕ್ತ ಸ್ಥಳಗಳನ್ನು ಪರಿಶೀಲಿಸಿದರು. ಆನೆಗೊಂದಿ ಗ್ರಾಮದ ಚಿಂತಾಮಣಿ ಸಮೀಪದ ಶಿಲಾ ಮಂಟಪವೊಂದನ್ನು ಅವರು ವೀಕ್ಷಿಸಿದರು. ಆದರೆ ಸ್ಥಳೀಯರು ಈ ಮಂಟಪದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಿಂಡ ಪ್ರದಾನ, ನಿಧನ ಹೊಂದಿದವರ ಶ್ರಾದ್ಧಾದಿ ಕರ್ಮಗಳನ್ನು ಮಾಡಲು ಉಪಯೋಗಿಸುತ್ತಾರೆ ಎಂದು ಮಾಹಿತಿ ನೀಡಿದರು.

ಬಳಿಕ ನವವೃಂದಾವನಕ್ಕೆ ಹೋಗುವ ಸ್ಥಳ ಪರಿಶೀಲಸಿದ ಶಾಸಕರು, ವರ್ಷದುದ್ದಕ್ಕೂ ಇಲ್ಲಿ ಜನ ಸಂಚಾರ ಇರುತ್ತದೆ. ಅಲ್ಲದೆ ಮಾಧ್ವಯತಿಗಳ ಆರಾಧನೆಯ ಉದ್ದೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಜನ ಬರುತ್ತಾರೆ. ಹೀಗಾಗಿ ಇದು ಸೂಕ್ತವಾಗಬಹುದು ಎಂಬ ಅನಿಸಿಕೆ ವ್ಯಕ್ತಪಡಿಸಿದರು.

ಅಂಜನಾದ್ರಿ, ಆನೆಗೊಂದಿ ಭಾಗದಲ್ಲಿ ಸ್ಥಳ ಪರಿಶೀಲನೆ: ಋಷಿಮುಖ ಪರ್ವತ ಸೇರಿದಂತೆ ಅಂಜನಾದ್ರಿ ಮತ್ತು ಆನೆಗೊಂದಿ ಭಾಗದಲ್ಲಿ ಒಟ್ಟು ಮೂರು ನಾಲ್ಕು ಸ್ಥಳಗಳನ್ನು ಪರಿಶೀಲಿಸಿದ ಶಾಸಕ ರೆಡ್ಡಿ, ಒಂದು ಸ್ಥಳ ನಿಗದಿ ಮಾಡಲಾಗುವುದು. ನಿತ್ಯವೂ ತುಂಗಭದ್ರಾ ನದಿಗೆ ಆರತಿ ಮಾಡುವ ಮೂಲಕ ನಾಡಿಗೆ ಉತ್ತಮ ಮಳೆ, ಬೆಳೆ, ರೈತರಿಗೆ ಆರ್ಥಿಕ ಚೈತನ್ಯ ನೀಡುವಂತೆ ತಾಯಿ ತುಂಗಭದ್ರೆಗೆ ಪ್ರಾರ್ಥನೆ ಸಲ್ಲಿಸುವ ಉದ್ದೇಶವಿದೆ ಎಂದರು.

ಕೇವಲ ಸ್ಥಳಿಯರು ಮಾತ್ರವಲ್ಲ, ಆನೆಗೊಂದಿ ಐತಿಹಾಸಿಕ ಸ್ಥಳಕ್ಕೆ ರಾಜ್ಯದ ನಾನಾ ಜಿಲ್ಲೆಗಳಿಂದ ಮಾತ್ರವಲ್ಲ, ಉತ್ತರ ಭಾರತದ ಹಲವು ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು, ಯಾತ್ರಾರ್ಥಿಗಳು ಆಗಮಿಸುವರು. ಮೊದಲಿಗೆ ಸ್ಥಳೀಯರಿಂದ ತುಂಗಾರತಿ ಮಾಡುವ ವಿಧಾನ ಆರಂಭಿಸಲಾಗುವುದು. ಬಳಿಕ ಹೊರಗಿನ ಜನರ ಆಸಕ್ತಿಗೆ ಅನುಗುಣವಾಗಿ ಧಾರ್ಮಿಕ ಕಾರ್ಯಕ್ರಮ ವಿಸ್ತರಿಸುವ ಉದ್ದೇಶವಿದೆ. ಈ ಮೂಲಕ ಸನಾತನ ಧರ್ಮ, ನಮ್ಮ ಹಿಂದೂ ಧರ್ಮದ ಪರಂಪರೆಯನ್ನು ಮುನ್ನಡೆಸಿಕೊಂಡು ಹೋಗುವ ಉದ್ದೇಶವಿದೆ ಎಂದು ಜಿ.ಜನಾರ್ದರೆಡ್ಡಿ ಈ ಸಂದರ್ಭದಲ್ಲಿ ಹೇಳಿದರು.

ಇದನ್ನೂ ಓದಿ: ಮೈಸೂರು: ಡಿ.22 ರಿಂದ 31ರವರೆಗೆ ಅರಮನೆಯಲ್ಲಿ ಫಲಪುಷ್ಪ ಪ್ರದರ್ಶ‌ನ: ಕಣ್ಮನ ಸೆಳೆಯಲಿದೆ 4 ಲಕ್ಷ ಹೂಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.