ETV Bharat / state

ಜ.4ರಿಂದ ಕೊಪ್ಪಳದಲ್ಲಿ ಕ್ಷಯರೋಗ ಹೆಲ್ಪ್​​ಲೈನ್ ಆರಂಭ - ಕೊಪ್ಪಳ ಲೇಟೆಸ್ಟ್​ ನ್ಯೂಸ್

ಕೊಪ್ಪಳ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕ್ಷಯರೋಗಿಗಳಿಗಾಗಿ ಸಹಾಯವಾಣಿ ಕೇಂದ್ರವನ್ನು ಆರಂಭ ಮಾಡಲಾಗುತ್ತಿದೆ. ಜ.04 ರಿಂದ ಕೇಂದ್ರ ಕಾರ್ಯ ನಿರ್ವಹಿಸಲಿದೆ.

ಕೊಪ್ಪಳದಲ್ಲಿ ಕ್ಷಯರೋಗ ಹೆಲ್ಪ್​​ಲೈನ್ ಆರಂಭ
Tuberculosis help line started in Koppal District
author img

By

Published : Jan 1, 2021, 12:53 PM IST

ಕೊಪ್ಪಳ: ಕ್ಷಯ ರೋಗಿಗಳನ್ನು ಪತ್ತೆ ಮಾಡಿ ಅವರಿಗೆ ಸೂಕ್ತ ಚಿಕಿತ್ಸೆ ದೊರಕಿಸಿ ಕೊಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಕೊಪ್ಪಳದಲ್ಲಿ ಕ್ಷಯರೋಗಿಗಳಿಗಾಗಿ ಹೆಲ್ಪ್​​ಲೈನ್ ಆರಂಭವಾಗುತ್ತಿದೆ. ಸಹಾಯವಾಣಿ ಕೇಂದ್ರಕ್ಕೆ ಬೇಕಾದ ಎಲ್ಲಾ ಅಗತ್ಯ ಸಿದ್ಧತೆಯನ್ನು ಆರೋಗ್ಯ ಇಲಾಖೆ ಈಗಾಗಲೇ ಮಾಡಿಕೊಂಡಿದ್ದು ಸೇವೆಗೆ ಸಜ್ಜಾಗಿದೆ.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಮಹೇಶ್​​ ಎಂ.ಜಿ ಮಾಹಿತಿ ನೀಡಿರುವುದು

ಕ್ಷಯ ರೋಗ ನಿಯಂತ್ರಣಕ್ಕಾಗಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಆದರೂ ಸಹ ಕ್ಷಯರೋಗಿಗಳ ಪತ್ತೆ ಸಂಪೂರ್ಣವಾಗಿ ಆಗುತ್ತಿಲ್ಲ. ಕ್ಷಯರೋಗಿಗಳ ಪತ್ತೆ ಮಾಡಿ ಬಳಿಕ ಅವರನ್ನು ಸೂಕ್ತ ಚಿಕಿತ್ಸೆಗೆ ಒಳಪಡಿಸಲು ಹೆಲ್ಪ್​​ಲೈನ್ ಆರಂಭಿಸಲು ಚಿಂತನೆ ನಡೆಸಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಕೊಪ್ಪಳದಲ್ಲಿ ಸಹಾಯವಾಣಿ ಪ್ರಾರಂಭಿಸಲಾಗುತ್ತಿದೆ.

ಇಲ್ಲಿನ ಹಳೆ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಕಚೇರಿಯಲ್ಲಿ ಈ ಸಹಾಯವಾಣಿ ಕೇಂದ್ರ ಪ್ರಾರಂಭವಾಗುತ್ತಿದ್ದು, 2021 ರ ಜ.04 ರಂದು ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ. ಈ ಸಹಾಯವಾಣಿ ಕೇಂದ್ರದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಾಲ್ಕು ಜನ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ‌. ಕ್ಷಯರೋಗಿಗಳ ಪತ್ತೆ ಬಳಿಕ ಅವರಿಗೆ ಚಿಕಿತ್ಸೆ, ವೈದ್ಯಕೀಯ ಸಲಹೆ, ಗುಣಾತ್ಮಕ ಸೇವೆ ಒದಗಿಸಲು ವ್ಯವಸ್ಥೆ ಮಾಡಲಾಗಿದೆ.

ಈ ಸಹಾಯವಾಣಿ ಕೇಂದ್ರದಲ್ಲಿನ ಈ ನಾಲ್ಕು ಜನ ಆಪ್ತಸಮಾಲೋಚಕರು ಕ್ಷಯರೋಗಿಗಳೊಂದಿಗೆ ಚಿಕಿತ್ಸೆ ವಿಷಯವಾಗಿ ಸಂಪರ್ಕದಲ್ಲಿರುತ್ತಾರೆ. ಅವರ ಮಾಹಿತಿ ಕಲೆ ಹಾಕಿ ಅವರನ್ನು ಚಿಕಿತ್ಸೆಗೆ ಒಳಪಡಿಸಲಿದ್ದಾರೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಮಹೇಶ್​​ ಎಂ.ಜಿ ತಿಳಿಸಿದರು.

ಹೆಲ್ಪ್​ಲೈನ್​​​ ನಂಬರ್ :

ಕೊಪ್ಪಳ - 9353161685, ಗಂಗಾವತಿ -9353161682, ಕುಷ್ಟಗಿ - 9353161658, ಯಲಬುರ್ಗಾ - 9353161624

ETV Bharat Logo

Copyright © 2024 Ushodaya Enterprises Pvt. Ltd., All Rights Reserved.