ಗಂಗಾವತಿ: ತುಂಗಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಹರಿಸಿ ಇನ್ನು ಒಂದು ತಿಂಗಳು ಕಳೆದಿಲ್ಲ. ಆಗಲೇ ಎರಡನೇ ಬಾರಿಗೆ ಕಾಲುವೆ ಒಡೆದ ಘಟನೆ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ರಾಂಪುರ ಮಾರ್ಗದಿಂದ ಬರುವ ಕೊರಮ್ಮ ಕ್ಯಾಂಪ್ ಬಳಿಯ ವಿಜಯನಗರದ ಕಾಲುವೆ ಮಳೆ ನೀರಿನ ರಭಸಕ್ಕೆ ಒಡೆದಿದ್ದು, ಇದೀಗ ಕೃಷಿ ಚಟುವಟಿಕೆ ಹಿನ್ನಡೆಗೆ ಕಾರಣವಾಗಿದೆ.
ಕಳೆದ ಎರಡು ದಿನಗಳಿಂದ ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಯಿಂದ ಗುಡ್ಡದ ನೀರು ಕಾಲುವೆಗೆ ನುಗ್ಗುತ್ತಿದೆ. ಹೀಗಾಗಿ ನೀರಿನ ಒತ್ತಡ ತಡೆಯದೇ ಕಾಲುವೆ ಈಗ ಎರಡನೇ ಬಾರಿಗೆ ಒಡೆದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಭತ್ತದ ನಾಟಿ ಈ ಭಾಗದಲ್ಲಿ ಈಗಷ್ಟೇ ಆರಂಭವಾಗಿದ್ದು, ಕಾಲುವೆ ಪದೇ ಪದೆ ಒಡೆಯುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.