ETV Bharat / state

ಪಕ್ಷೇತರರ ಒಕ್ಕೂಟದಿಂದ ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ

ಸಮಾನ ಮನಸ್ಕ ಸಮಾನ ಚಿಂತನೆಯುಳ್ಳ ಪಕ್ಷೇತರರ ಒಕ್ಕೂಟದಿಂದ ಕೊಪ್ಪಳ ಜಿಲ್ಲೆಯ ಐದು ವಿಧಾನಸಭೆ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಕಣಕ್ಕೆ ಇಳಿಸಲಾಗುವುದು ಎಂದು ಒಕ್ಕೂಟದ ಸಂಚಾಲಕ ಬಸವರಾಜ ಮ್ಯಾಗಳಮನಿ ಹೇಳಿದ್ದಾರೆ.

Basavaraja Magalamani Non-Partisan Union
ಪಕ್ಷೇತರರ ಒಕ್ಕೂಟದ ಸಂಚಾಲಕ ಬಸವರಾಜ ಮ್ಯಾಗಳಮನಿ ಹಾಗೂ ಬೆಂಬಲಿಗರು
author img

By

Published : Feb 8, 2023, 5:26 PM IST

Updated : Feb 8, 2023, 10:50 PM IST

ಪಕ್ಷೇತರರ ಒಕ್ಕೂಟದ ಸಂಚಾಲಕ ಬಸವರಾಜ ಮ್ಯಾಗಳಮನಿ ಹಾಗೂ ಬೆಂಬಲಿಗರು

ಗಂಗಾವತಿ: ನಾನಾ ಪಕ್ಷದಲ್ಲಿ ಅಸಮಾಧಾನಿತರ, ಟಿಕೆಟ್ ಅಕಾಂಕ್ಷಿಗಳ, ಟಿಕೆಟ್ ವಂಚಿತರ, ಸಮಾನ ಮನಸ್ಕ ಹಾಗೂ ಸಮಾನ ಚಿಂತನೆಯುಳ್ಳ ಪಕ್ಷೇತರರ ಒಕ್ಕೂಟ ರಚಿಸಿಕೊಂಡಿದ್ದು, ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದು ಸಂಚಾಲಕ ಬಸವರಾಜ ಮ್ಯಾಗಳಮನಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಬಯಸುವ ಮತ್ತು ನಾನಾ ಪಕ್ಷದ ಟಿಕೆಟ್ ಅಕಾಂಕ್ಷಿಗಳ, ವಂಚಿತರ ಒಕ್ಕೂಟ ಅಸ್ತಿತ್ವಕ್ಕೆ ತರಲಾಗಿದೆ. ಐದೂ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಸಮಾನ ಮನಸ್ಕ ಸಮಾನ ಚಿಂತನೆ ಒಕ್ಕೂಟ: ಸಮಾನ ಮನಸ್ಕ ಮತ್ತು ಸಮಾನ ಚಿಂತನೆಗಳುಳ್ಳ ವ್ಯಕ್ತಿಗಳ ಒಕ್ಕೂಟವನ್ನು ಅಸ್ತಿತ್ವಕ್ಕೆ ತರಲಾಗುವುದು. ಕೊಪ್ಪಳ, ಕನಕಗಿರಿ, ಗಂಗಾವತಿ, ಯಲಬುರ್ಗಾ ಮತ್ತು ಕುಷ್ಟಗಿ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಒಕ್ಕೂಟದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದು ಅವರು ಸ್ಪಷ್ಟ ಪಡಿಸಿದರು.

ಕನಕಗಿರಿ ಮೀಸಲು ಕ್ಷೇತ್ರದಿಂದ ಸ್ಪರ್ಧೆ: ಈಗಾಗಲೇ ಕನಕಗಿರಿ ಮೀಸಲು ಕ್ಷೇತ್ರದಿಂದ ನಾನು ಕಣಕ್ಕೆ ಇಳಿಯುತ್ತಿದ್ದೇನೆ. ಕಳೆದ ಐದು ವರ್ಷದಿಂದ ಕ್ಷೇತ್ರದಲ್ಲಿನ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇನೆ. ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ, ಬಡವರಿಗೆ ಸರಕಾರದ ಯೋಜನೆ, ಗ್ರಾಮೀಣ ಭಾಗಕ್ಕೆ ರಸ್ತೆ ವಿಚಾರವಾಗಿ ಈಗಾಗಲೆ ಸಾಕಷ್ಟು ಹೋರಾಟ ಮಾಡಿದ್ದೇನೆ ಎಂದು ಅಭಿಮತ ವ್ಯಕ್ತಪಡಿಸಿದರು.

ಈ ಮೊದಲು ಆಮ್ ಆದ್ಮಿ ಪಕ್ಷದಿಂದ ಕನಕಗಿರಿ ಕ್ಷೇತ್ರದಿಂದ ಕಣಕ್ಕೆ ಇಳಿಯುವ ಬಗ್ಗೆ ಚಿಂತನೆ ನಡೆಸಲಾಗಿತ್ತು. ಆದರೆ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿರಾಜ್ ಆಗಮಿಸಿ ನಿಮ್ಮ ಕ್ಷೇತ್ರದಲ್ಲಿ ವೈಯಕ್ತಿಕ ಪ್ರಚಾರ ಮಾಡಿಕೊಳ್ಳಿ. ಆ ಮೇಲೆ ಟಿಕೆಟ್ ನಿಗದಿ ಮಾಡುತ್ತೇವೆ ಎಂದು ಗೊಂದಲ ಮೂಡಿಸಿದ್ದರಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದೇನೆ ಎಂದರು.

ಬಳ್ಳಾರಿ ಜನರಿಗೆ ವಂಚಿಸಿದ್ದ ರೆಡ್ಡಿ- ಆರೋಪ​ :ಜನಾರ್ದನ ರೆಡ್ಡಿ ತಮ್ಮ ರಾಜಕೀಯ ಜೀವನದ ಅಸ್ತಿತ್ವ ಕಾಣಲು ಗಂಗಾವತಿಗೆ ಬಂದಿದ್ದಾರೆ. ಈಗಾಗಲೇ ಬಳ್ಳಾರಿ ವಿಧಾನಸಭಾ ಕ್ಷೇತ್ರ ಮತ್ತು ಜಿಲ್ಲೆಯ ಜನರಿಗೆ ವಂಚನೆ ಮಾಡಿದಂತೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಜನರಿಗೆ ಮಂಕುಬೂದಿ ಎರಚಲು ಬಂದಿದ್ದಾರೆ ಎಂದು ಮ್ಯಾಗಳಮನಿ ಆರೋಪಿಸಿದರು.

ಆಂಧ್ರ ಮೂಲದ ರೆಡ್ಡಿ ಮಣೆ ಬೇಡ:ಆಕಾಶದಲ್ಲಿ ಅರಮನೆ ತೋರಿಸುವ ಮೂಲಕ ರೆಡ್ಡಿ ಇಲ್ಲಿನ ಜನರಿಗೆ ವಂಚನೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿನ ಜನ ಪ್ರಬುದ್ಧರಿದ್ದು ಸೂಕ್ತ ವ್ಯಕ್ತಿಗೆ ಮತದಾನ ಮಾಡಬೇಕು. ರೆಡ್ಡಿಯಂತ ಆಂಧ್ರ ಮೂಲದವರಿಗೆ ಮಣೆ ಹಾಕಬಾರದು ಎಂದರು. ರೆಡ್ಡಿಯ ಪಾರ್ಟಿಗೆ ಹೋದ ಬಹುತೇಕ ಸ್ಥಳೀಯ ಯುವಕರು, ಮುಖಂಡರು ಡುಡ್ಡಿನ ಆಸೆಗೆ ಹೋದವರಲ್ಲ. ಹೀಗಾಗಿ ನಾಯಕತ್ವದ ಆಸರೆ ಸಿಗಬಹುದು ಎಂಬ ಕಾರಣಕ್ಕೆ ಅವರೆಲ್ಲರೂ ರೆಡ್ಡಿಯ ಹಿಂದೆ ಹೋಗಿದ್ದಾರೆ. ರೆಡ್ಡಿ ಆಮಿಷಕ್ಕೆ ಒಳಗಾಗುವ ಜನ ಗಂಗಾವತಿ ಅಥವಾ ಕೊಪ್ಪಳದ ಜನ ಅಲ್ಲ ಎಂದು ಮ್ಯಾಗಳಮನಿ ಹೇಳಿದರು.

ಇದನ್ನೂ ಓದಿ:ಅನುದಾನದಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ: ಮೋದಿ ಸರ್ಕಾರದ ವಿರುದ್ಧ ಹೆಚ್​ಡಿಕೆ ಟೀಕೆ:

Last Updated : Feb 8, 2023, 10:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.