ETV Bharat / state

ನಿಯಂತ್ರಣ ತಪ್ಪಿ ಟಾಟಾ ಏಸ್ ಪಲ್ಟಿ: ಐವರ ಸ್ಥಿತಿ ಗಂಭೀರ

ರಸ್ತೆ ಕುಸಿತದ ಕಾರಣದಿಂದ ಟಾಟಾ ಏಸ್ ವಾಹನವೊಂದು ಪಲ್ಟಿಯಾಗಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಘಟನೆ ತಳವಗೇರಾ-ಚಳಗೇರಾ ಮಧ್ಯೆ ನಡೆದಿದೆ.

tata ace
ಅಪಘಾತ
author img

By

Published : Nov 25, 2020, 6:13 PM IST

ಕುಷ್ಟಗಿ(ಕೊಪ್ಪಳ): ಕುಷ್ಟಗಿ ತಾಲೂಕಿನ ಹನುಮಸಾಗರ ರಸ್ತೆಯ ತಳವಗೇರಾ-ಚಳಗೇರಾ ಮಧ್ಯೆ ರಸ್ತೆಯ ಬದಿ ಕುಸಿತ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ಪಲ್ಟಿಯಾಗಿ 5 ಜನರಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ.

ಟಾಟಾ ಏಸ್ ಪಲ್ಟಿಯಾಗಿ ಗಾಯಗೊಂಡವರು

ಮುತರುಜಾಸಾಬ್ ಯಲಬುರ್ಗಾ, ಮಾಸನಬಿ ಮುತರ್​ಜಾಸಾಬ್, ಖಜಾಬಿ, ಮಾಬಮ್ಮ ಮಾಲಂಗಸಾಬ್ ಸಾಬ್, ಫಾತೀಮಾ ಮುತರುಜಾ ಸಾಬ್ ತೀವ್ರ ಗಾಯಗೊಂಡವರು. ಗಂಗಾವತಿಯ ಕಿಲ್ಲೇ ಏರಿಯಾದ ಮುಸ್ಲಿಂ ಸಮುದಾಯದ ನಿವಾಸಿಗಳಾದ ಇವರು ಟಾಟಾ ಏಸ್​ ವಾಹನದಲ್ಲಿ ಕುಷ್ಟಗಿ ತಾಲೂಕಿನ ಹೂಲಗೇರಾಕ್ಕೆ ಗ್ಯಾರವೀ ಕಾರ್ಯಕ್ರಮಕ್ಕೆ ಹೊರಟಿದ್ದರು. ಕುಷ್ಟಗಿಯಿಂದ ತಳವಗೇರಾ ಮಾರ್ಗದ ಮೂಲಕ ಚಳಗೇರಾ ಸೀಮಾದಲ್ಲಿ ರಸ್ತೆ ಕುಸಿತ ಉಂಟಾಗಿದ್ದು, ತಗ್ಗಾದ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವಾಹನದಲ್ಲಿ ಮೂವರು ಮಕ್ಕಳು ಸೇರಿದಂತೆ 12 ಜನ ಪ್ರಯಾಣಿಸುತ್ತಿದ್ದರು. ಈ ಪೈಕಿ ಗಾಯಾಳುಗಳನ್ನು 108 ವಾಹನದ ಮೂಲಕ ಕುಷ್ಟಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಟಾಟಾ ಏಸ್ ವಾಹನ ಪಲ್ಟಿಗೆ ರಸ್ತೆ ಕುಸಿತ ಕಾರಣವಾಗಿದೆ. ಪದೇ ಪದೆ ಈ ಸ್ಥಳದಲ್ಲಿ ದುರಂತವಾಗುತ್ತಿದ್ದರೂ ಲೋಕೋಪಯೋಗಿ ಇಲಾಖೆ ಮಾತ್ರ ಇನ್ನೂ ಕಣ್ಮುಚ್ಚಿ ಕುಳಿತಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.