ETV Bharat / state

ಮಾರುಕಟ್ಟೆ ಬೆಲೆಗಿಂತ ಬೆಂಬಲ ಬೆಲೆ ಇಳಿಮುಖ: ತೊಗರಿ ಮಾರಾಟಕ್ಕೆ ರೈತರು ಹಿಂದೇಟು

author img

By

Published : Feb 6, 2021, 9:50 AM IST

Updated : Feb 6, 2021, 9:57 AM IST

ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ತೊಗರಿ ಮಾರಲು ಮುಂದೆ ಬರುತ್ತಿದ್ದಾರೆ. ನೋಂದಾಯಿತ ರೈತರನ್ನು ಕೇಳಿದರೆ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿರುವುದಾಗಿ ಹೇಳುತ್ತಿದ್ದಾರೆ. ಫೆಬ್ರವರಿ 28 ರಂದು ಬೆಂಬಲ ಬೆಲೆ ಕೇಂದ್ರದಲ್ಲಿ ತೊಗರಿ ಖರೀದಿಗೆ ಕೊನೆಯ ದಿನಾಂಕವಾಗಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ‌ ಸಹಕಾರ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಶೇಖಪ್ಪ ಅಬ್ಬಿಗೇರಿ ತಿಳಿಸಿದರು.

price
price

ಕುಷ್ಟಗಿ : ಮಾರುಕಟ್ಟೆ ಬೆಲೆಗಿಂತ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಕಡಿಮೆಯಾಗಿರುವ ಹಿನ್ನೆಲೆ ತೊಗರಿ ಮಾರಾಟ ಮಾಡಲು ಬೆಳೆಗಾರರು ಹಿಂದೇಟು ಹಾಕುತ್ತಿದ್ದಾರೆ.

ಮಾರುಕಟ್ಟೆ ಬೆಲೆಗಿಂತ ಬೆಂಬಲ ಬೆಲೆ ಇಳಿಮುಖ

ಪ್ರತಿ ಕ್ವಿಂಟಲ್​ಗೆ ಬೆಂಬಲ ಬೆಲೆ 6 ಸಾವಿರ ರೂಪಾಯಿಯಾಗಿದ್ದು, ಕುಷ್ಟಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಗೆ 6,300 ರೂಪಾಯಿದೆ. ತಾವರಗೇರಾ ಉಪ ಮಾರುಕಟ್ಟೆಯಲ್ಲಿ 6,500 ರೂ. ದರ ಇದೆ. ಹೀಗಾಗಿ ರೈತರು ತೊಗರಿಯನ್ನು ಬೆಂಬಲ ಬೆಲೆಯ ಖರೀದಿ ಕೇಂದ್ರಕ್ಕೆ ಸಾಗಿಸದೆ ನೇರವಾಗಿ ಎಪಿಎಂಸಿ ಮಾರುಕಟ್ಟೆಗೆ ಸಾಗಿಸುತ್ತಿರುವುದು ಕಂಡು ಬಂದಿದೆ. ಕುಷ್ಟಗಿ ಖರೀದಿ ಕೇಂದ್ರದಲ್ಲಿ ಆನ್ಲೈನ್ ನೋಂದಾಯಿತ 470 ರೈತರಲ್ಲಿ ಈವರೆಗೂ 88 ರೈತರ 1,212 ಕ್ವಿಂಟಲ್ ಖರೀದಿಯಾಗಿದೆ.
ಹನುಮಸಾಗರ ಕೇಂದ್ರದಲ್ಲಿ ಇದೇ ಪರಿಸ್ಥಿತಿ ಮುಂದುವರೆದಿದ್ದು, ನೋಂದಾಯಿತ 509 ರೈತರಲ್ಲಿ 184 ರೈತರು 5,626 ಕೆ.ಜಿ.ಮಾರಾಟ ಮಾಡಿದ್ದಾರೆ. ತೊಗರಿ ಖರೀದಿ ಕೇಂದ್ರದಲ್ಲಿ 1440 ನೋಂದಾಯಿತ ರೈತರಲ್ಲಿ ಈವರೆಗೆ 207 ರೈತರು 5,846 ಕೆ.ಜಿ. ತೊಗರಿ ಖರೀದಿಯಾಗಿದೆ.

ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ತೊಗರಿ ಮಾಡಲು ಮುಂದೆ ಬರುತ್ತಿದ್ದಾರೆ. ನೋಂದಾಯಿತ ರೈತರನ್ನು ಕೇಳಿದರೆ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿರುವುದಾಗಿ ಹೇಳುತ್ತಿದ್ದಾರೆ. ಫೆಬ್ರವರಿ 28 ರಂದು ಬೆಂಬಲ ಬೆಲೆ ಕೇಂದ್ರದಲ್ಲಿ ತೊಗರಿ ಖರೀದಿಗೆ ಕೊನೆಯ ದಿನಾಂಕವಾಗಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ‌ ಸಹಕಾರ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಶೇಖಪ್ಪ ಅಬ್ಬಿಗೇರಿ ತಿಳಿಸಿದರು.

ಬೆಂಬಲ ಬೆಲೆ ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಾದರೆ ಮಾತ್ರ ರೈತರು, ಬೆಂಬಲ ಕೇಂದ್ರಕ್ಕೆ ಮುಖ ಮಾಡುವ ಸಾಧ್ಯತೆಗಳಿವೆ. ಇಲ್ಲಿ ನಿಯೋಜನೆಗೊಂಡಿರುವ 14 ಹಮಾಲರಿಗೂ ಕೆಲಸ ಇಲ್ಲದಂತಾಗಿದೆ.
ಕಲಬುರಗಿಯಲ್ಲಿ ಸಚಿವ ಉಮೇಶ್ ಕತ್ತಿ, ಬೆಂಬಲ ಬೆಲೆ ಪ್ರತಿ ಕ್ವಿಂಟಲ್ ಗೆ 8 ಸಾವಿರ ರೂ. ಪ್ರಸ್ತಾಪಿಸಿದ್ದರು. ಆದರೆ ಇನ್ನೂ ಭರವಸೆಯಾಗಿಯೇ ಉಳಿದಿದೆ. ಕೋವಿಡ್ ಸಂಕಷ್ಟದಲ್ಲಿ ತೊಗರಿ ಬೆಳೆಗೆ 8 ಸಾವಿರ ರೂ. ನಿಗದಿಪಡಿಸಬೇಕು. ಸದ್ಯ ಖರೀದಿ ಕೇಂದ್ರದಲ್ಲಿ ಪ್ರತಿ ಕ್ವಿಂಟಲ್ ಗೆ 6 ಸಾವಿರ ರೂಪಾಯಿ ಇದೆ. ಬಿಲ್ ನಂತರವೂ ಉಳಿದ 2 ಸಾವಿರ ರೂಪಾಯಿ ರೈತರ ಖಾತೆಗೆ ಜಮೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ನಜೀರ್ಸಾಬ್ ಮೂಲಿಮನಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Last Updated : Feb 6, 2021, 9:57 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.