ಕುಷ್ಟಗಿ(ಕೊಪ್ಪಳ): ಸೂರ್ಯಾಸ್ತಮಾನದ ವರ್ಣ ವೈಭವದ ದೃಶ್ಯವನ್ನು ವನ್ಯ ಜೀವಿ ಛಾಯಾಗ್ರಾಹಕ ಪಾಂಡುರಂಗ ಆಶ್ರೀತ್ ಅದ್ಬುತವಾಗಿ ಸೆರೆ ಹಿಡಿದಿದ್ದಾರೆ.
ಇತ್ತೀಚೆಗೆ ಪಟ್ಟಣದ ಹೊರವಲಯದ ಶಾಖಾಪುರ ರಸ್ತೆಯ ಶ್ರೀ ಅಡವಿರಾಯ ದೇವಸ್ಥಾನದ ಬಳಿ, ಪಶ್ಚಿಮ ದಿಕ್ಕಿನಲ್ಲಿ ದಿನಕರ ಎಂದಿನಂತೆ ಮುಳುಗುವ ಸಂದರ್ಭದಲ್ಲಿ ಆಗಸದಲ್ಲಿ ಸೂರ್ಯರಶ್ಮಿಯ ವರ್ಣ ವೈಭವ ದೃಶ್ಯ ಕಾವ್ಯ ಕಟ್ಟಿಕೊಟ್ಟಿದೆ.
ಈ ಸಕಾಲಿಕ ಸಂದರ್ಭವನ್ನು ಛಾಯಾಗ್ರಾಹಕ ಪಾಂಡುರಂಗ ಆಶ್ರೀತ್ ಅದ್ಬುತವಾಗಿ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿರುವುದು ಅಮೂಲ್ಯ ಕ್ಷಣ ಎಂದು ಬಣ್ಣಿಸಿದ್ದಾರೆ.