ETV Bharat / state

ಹಥ್ರಾಸ್ ಅತ್ಯಾಚಾರ ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕು.. ಶಾಸಕ ಕೆ ರಾಘವೇಂದ್ರ ಹಿಟ್ನಾಳ್

ನಿರ್ಭಯಾ ಪ್ರಕರಣದಲ್ಲಿ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಿದ್ದರೂ ಸಹ ಇಂತಹ ಘಟನೆಗಳು ನಡೆಯುತ್ತಿವೆ. ಹಥ್ರಾಸ್​ ಘಟನೆ ದೇಶದ ಜನರನ್ನು ಬೆಚ್ಚಿಬೀಳಿಸಿದೆ..

ಶಾಸಕ ಕೆ. ರಾಘವೇಂದ್ರ ಹಿಟ್ನಾಳ್
ಶಾಸಕ ಕೆ. ರಾಘವೇಂದ್ರ ಹಿಟ್ನಾಳ್
author img

By

Published : Oct 3, 2020, 10:10 PM IST

ಕೊಪ್ಪಳ : ಉತ್ತರಪ್ರದೇಶದ ಹಥ್ರಾಸ್​ನಲ್ಲಿ ನಡೆದ ಘಟನೆ ದೇಶದ ಜನರನ್ನು ಬೆಚ್ಚಿಬೀಳಿಸಿದೆ. ಇಂತಹ ಘಟನೆ ಮರುಕಳಿಸದಂತೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಕೊಪ್ಪಳ ಶಾಸಕ ಕೆ ರಾಘವೇಂದ್ರ ಹಿಟ್ನಾಳ್ ಹೇಳಿದರು.

ಈ ಕುರಿತು ಮಾತನಾಡಿದ ಅವರು, ನಿರ್ಭಯಾ ಪ್ರಕರಣದಲ್ಲಿ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಿದ್ರೂ ಸಹ ಇಂತಹ ಘಟನೆ ನಡೆಯುತ್ತಿವೆ. ಹಥ್ರಾಸ್​ ಘಟನೆ ದೇಶದ ಜನರನ್ನು ಬೆಚ್ಚಿಬೀಳಿಸಿದೆ. ಇಂತಹ ಕೃತ್ಯವೆಸಗುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಕೆ ರಾಘವೇಂದ್ರ ಹಿಟ್ನಾಳ್

ಸಿನಿಮಾ ರಂಗದಲ್ಲಿನ ಡ್ರಗ್ಸ್​​ ಕುರಿತು ಮಾತನಾಡಿದ ಅವರು, ಡ್ರಗ್ಸ್ ಪಿಡುಗನ್ನು ತಡೆಗಟ್ಟಬೇಕು. ರಾಜಕಾರಣಿಗಳು, ಸಿನಿಮಾ ನಟರು ಯಾರೇ ಭಾಗಿಯಾಗಿದ್ದರೂ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ತೊಡೆದು ಹಾಕಬೇಕು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರು ಮಾರ್ಮಿಕವಾಗಿ ಹೇಳಿದ್ದಾರೆ. ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಕೊಪ್ಪಳ ಜಿಪಂ ಅಧ್ಯಕ್ಷ ಹೆಚ್ ವಿಶ್ವನಾಥ ಅವರು ಸದಸ್ಯರ ವಿಶ್ವಾಸ ಉಳಿಸಿಕೊಳ್ಳಲಿಲ್ಲ. ಮಾತಿನಂತೆ ಅವರು ನಡೆದುಕೊಂಡಿದ್ರೆ, ಎಲ್ಲಾ ಸದಸ್ಯರು ಅವರಿಗೆ ಕೈಜೋಡಿಸುತ್ತಿದ್ದರು‌. ಮುಂದೆ ಯಾರೂ ಜಿಪಂ ಅಧ್ಯಕ್ಷರಾಗುತ್ತಾರೆ ಎಂಬುದನ್ನು ಸದಸ್ಯರ ಒಪ್ಪಿಗೆ ಪಡೆದು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಶಾಸಕ ಕೆ ರಾಘವೇಂದ್ರ ಹಿಟ್ನಾಳ್ ಇದೇ ಸಂದರ್ಭದಲ್ಲಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.