ETV Bharat / state

ಅಂಜನಾದ್ರಿ ಬೆಟ್ಟದಲ್ಲಿ ರಾಮ ಭಂಟನಿಗೆ ವಿಶೇಷ ಪೂಜೆ - ಅಯೋಧ್ಯೆ ರಾಮ ಮಂದಿರ ಭೂಮಿ ಪೂಜೆ

ಅಂಜನಾದ್ರಿ ಬೆಟ್ಟದಲ್ಲಿನ ಆಂಜನೇಯ ದೇವಸ್ಥಾನವನ್ನು ಹಿಂದೂಪರ ಕಾರ್ಯಕರ್ತರು ಕೇಸರಿ ಧ್ವಜ ಮತ್ತು ಹೂಗಳಿಂದ ಅಲಂಕಾರಗೊಳಿಸಿದ್ದರು. ಬೆಳಗ್ಗೆಯಿಂದ ನಡೆದ ವಿಶೇಷ ಪೂಜೆಯ ವೇಳೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಅಂಜನಾದ್ರಿ ಬೆಟ್ಟದಲ್ಲಿ ವಿಶೇಷ ಪೂಜೆ, ಹೋಮ ಹವನ

author img

By

Published : Aug 5, 2020, 5:43 PM IST

ಕೊಪ್ಪಳ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮದ ಹಿನ್ನೆಲೆಯಲ್ಲಿ‌ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟದಲ್ಲಿ ಇಂದು ವಿಶೇಷ ಪೂಜೆ, ಹೋಮ ಹವನಗಳು ನಡೆದವು.

ಅಂಜನಾದ್ರಿ ಬೆಟ್ಟದಲ್ಲಿ ವಿಶೇಷ ಪೂಜೆ, ಹೋಮ ಹವನ

ರಾಮನ ಭಂಟ ಹನುಮ ಜನಿಸಿದ ಅಂಜನಾದ್ರಿ ಬೆಟ್ಟದಲ್ಲಿನ ಆಂಜನೇಯ ದೇವಸ್ಥಾನವನ್ನು ಹಿಂದೂಪರ ಕಾರ್ಯಕರ್ತರು ಕೇಸರಿ ಧ್ವಜ ಮತ್ತು ಹೂಗಳಿಂದ ಶೃಂಗರಿಸಿದ್ದರು. ಬೆಳಗ್ಗೆಯಿಂದ ನಡೆದ ವಿಶೇಷ ಪೂಜಾ ಕಾರ್ಯದಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಅಲ್ಲದೆ ಚಕ್ರವರ್ತಿ ಸೂಲಿಬೆಲೆ ಅವರಿಂದ ಹೋಮದ ಪೂರ್ಣಾಹುತಿ ನೆರವೇರಿತು.

ಇದರ ಜೊತೆಗೆ ಹನುಮಂತನ ಭಾವಚಿತ್ರ ವಿದ್ದ ಗಾಳಿಪಟವನ್ನು ಆಗಸದಲ್ಲಿ ಹಾರಿಸಲಾಯಿತು. ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಟೀಂ ಮಂಗಳೂರು ತಂಡ ಗಾಳಿ ಪಟವನ್ನು ಹಾರಿಸಿತು. ‘ಹನುಮನ ನಾಡಿನಿಂದ ರಾಮನ ಸೇವೆ’ ಎಂಬ ಸಂದೇಶ ಹೊಂದಿದ್ದ ಗಾಳಿಪಟ ಗಮನ ಸೆಳೆಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.