ETV Bharat / state

ಹೆತ್ತವಳ ಕೈ ಬಿಟ್ಟ ಮಗ: ಸಿಮ್​ ಇಲ್ಲದ ಮೊಬೈಲ್​ ಕೊಟ್ಟು ಪರಾರಿ - ಈಟಿವಿ ಭಾರತ ಕನ್ನಡ

ಎರಡು ದಿನದ ಹಿಂದೆ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಕರೆತಂದ ಮಗ ಸಿಮ್ ಕಾರ್ಡ್ ಇಲ್ಲದ ಮೊಬೈಲ್ ಹಾಗೂ ತನ್ನ ಮೊಬೈಲ್ ನಂಬರ್ ಇದೆ ಎಂದು ಖಾಲಿ ಹಾಳೆ ಕೈಗಿತ್ತು ತಾಯಿಯನ್ನು ಇಲ್ಲೆ ಬಿಟ್ಟು ತೆರಳಿದ್ದಾನೆ.

Son abandoned his mother
ತಾಯಿಯನ್ನು ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಕರೆತಂದು ಬಿಟ್ಟು ಹೋದ ಮಗ
author img

By

Published : Aug 4, 2022, 8:26 AM IST

ಕೊಪ್ಪಳ: ತಾಯಿ ಇಲ್ಲದ ತಬ್ಬಲಿಗಳನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಬದುಕಿರುವ ತಾಯಿಯನ್ನೆ ದೂರದ ಊರಿಗೆ ಕರೆತಂದು ಬಿಟ್ಟು ಆಕೆಯನ್ನೆ ತಬ್ಬಲಿ ಮಾಡಿ ಹೋಗಿರುವ ಅಮಾನವೀಯ ಘಟನೆ ಜರುಗಿದೆ. ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಕಳೆದೆರಡು ದಿನದ ಹಿಂದೆ ತಾಯಿಯೊಂದಿಗೆ ಬಂದಿದ್ದ ಪುತ್ರನೋರ್ವ ಆಕೆಯನ್ನು ದೇವಸ್ಥಾನದ ಆವರಣದಲ್ಲಿ ಬಿಟ್ಟು ಹೋಗಿದ್ದಾನೆ.

ಆಕೆ ಸುಮಾರು 80 ವರ್ಷಗಳ ಆಸುಪಾಸಿನ ವೃದ್ಧೆ, ತನ್ನ ಹೆಸರು ಖಾಸೀಂ ಬಿ., ತನ್ನದು ಉಜ್ಜಯಿನಿ ಗ್ರಾಮ ಎಂದು ಹೇಳಿಕೊಂಡಿದ್ದಾಳೆ. ಇತರ ವಿವರಗಳನ್ನು ಸರಿಯಾಗಿ ನೀಡಿಲ್ಲ. ಅಜ್ಜಿಯಿಂದ ಹೆಚ್ಚಿನ ವಿವರಗಳಾಗಲಿ ಅಥವಾ ದಾಖಲೆಗಳಾಗಲಿ ಇನ್ನು ದೊರಕಿಲ್ಲ. ಎರಡು ದಿನದ ಹಿಂದೆ ಇಲ್ಲಿಗೆ ಕರೆತಂದ ಮಗ ಸಿಮ್ ಕಾರ್ಡ್ ಇಲ್ಲದ ಮೊಬೈಲ್ ಹಾಗೂ ತನ್ನ ಮೊಬೈಲ್ ನಂಬರ್ ಇದೆ ಎಂದು ಖಾಲಿ ಹಾಳೆ ಕೈಗಿತ್ತು ಇಲ್ಲಿಂದ ತೆರಳಿದ್ದಾನೆ ಎನ್ನಲಾಗಿದೆ.

ರಾತ್ರಿಯಾದರೂ ಅಜ್ಜಿ ಬಳಿ ಯಾರೂ ಬರದಿರುವುದನ್ನು ಗಮನಿಸಿದ ಸ್ಥಳೀಯರು ತಿನ್ನಲು ಆಹಾರ ನೀಡಿದ್ದಾರೆ. ಮಲಗಲು ಹಾಸಿಗೆ, ದಿಂಬು ನೀಡಿದ್ದಾರೆ. ಬಳಿಕ ಮೊಬೈಲ್ ಪರಿಶೀಲಿಸಿದಾಗ ಸಿಮ್ ಕಾರ್ಡ್ ಇಲ್ಲದಿರುವುದು ಬೆಳಕಿಗೆ ಬಂದಿದೆ. ಅಜ್ಜಿ ಯಾರು, ಯಾವ ಊರು ಎಂಬಿತ್ಯಾದಿ ವಿವರ ಸಿಕ್ಕಿಲ್ಲ‌. ಕೂಡಲೇ ಹಿರಿಯ ನಾಗರಿಕರ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಅಜ್ಜಿಯನ್ನು ಹಿರಿಯ ನಾಗರಿಕರ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿ ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ. ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ ಕ್ಷೇತ್ರದ ಅಧಿಕಾರಿ ಮುತ್ತಣ್ಣ ಗುದ್ನೆಪ್ಪನವರ್ ಹಾಗೂ ಇತರ ಸಿಬ್ಬಂದಿ ತೆರಳಿ ಅಜ್ಜಿಯನ್ನು ರಕ್ಷಿಸಿದ್ದಾರೆ. ಮುನಿರಾಬಾದ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ.

ಇದನ್ನೂ ಓದಿ : ಕುಡಿತ ಬಿಡುವಂತೆ ಪೋಷಕರಿಂದ ಬುದ್ಧಿವಾದ : ಮನನೊಂದು ವ್ಯಕ್ತಿ ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.