ETV Bharat / state

ಸಾಮಾಜಿಕ ಅಂತರಕ್ಕೆ ತಾ.ಪಂ. ನೋಡಲ್ ಅಧಿಕಾರಿಯ ಹೊಸ ಐಡಿಯಾ!

author img

By

Published : May 27, 2020, 7:27 PM IST

ಕುಷ್ಟಗಿ ತಾಲೂಕಿನ​ ಪಂಚಾಯಿತಿ ವಸತಿ ಯೋಜನೆಯ ನೋಡಲ್ ಅಧಿಕಾರಿ ಕಲ್ಲೇಶ ಗುರಿಕಾರ ಅವರು ತಮ್ಮ ಕಚೇರಿಯಲ್ಲಿ ಸ್ವಯಂ ನಿರ್ಬಂಧ ಹಾಕಿಕೊಂಡಿದ್ದು, ವಸತಿ ಯೋಜನೆಗೆ ಸಂಬಂಧಿಸಿದಂತೆ ಕೆಲಸ ಕಾರ್ಯಗಳಿಗಾಗಿ ಬಂದು ನಿಲ್ಲುತ್ತಿದ್ದ ಜನರನ್ನು ನಿಯಂತ್ರಿಸುವ ಹೊಸ ತಂತ್ರಗಾರಿಕೆ ಕಂಡು ಕೊಂಡಿದ್ದಾರೆ.

Social Security New Idea from Nodal Officer in kustagi
ತಾ.ಪಂ. ನೋಡಲ್ ಅಧಿಕಾರಿಯ ಹೊಸ ಐಡಿಯಾ

ಕುಷ್ಟಗಿ(ಕೊಪ್ಪಳ): ಕೊರೊನಾ ವೈರಸ್ ತಾಲೂಕಿಗೂ ಕಾಲಿರಿಸಿದೆ. ಆದರೆ, ಇಲ್ಲಿನ ಜನ ಮಾಸ್ಕ್​​ ಧರಿಸುವ ಹಾಗೂ ಸಾಮಾಜಿಕ ಅಂತರದ ಬಗ್ಗೆ ಜಾಣ ಮರೆವನ್ನ ಮೈಗೂಡಿಸಿಕೊಂಡಿದ್ದಾರೆ, ಹೀಗಾಗಿ ತಾಲೂಕಿನ​ ಪಂಚಾಯಿತಿ ವಸತಿ ಯೋಜನೆಯ ನೋಡಲ್ ಅಧಿಕಾರಿ ಕಲ್ಲೇಶ ಗುರಿಕಾರ ಹೊಸ ಐಡಿಯಾ ಜಾರಿಗೆ ತಂದಿದ್ದಾರೆ.

Social Security New Idea from Nodal Officer in kustagi
ನೋಡಲ್ ಅಧಿಕಾರಿಯಿಂದ ಹೊಸ ಐಡಿಯಾ

ಕುಷ್ಟಗಿ ತಾಲೂಕಿನ​ ಪಂಚಾಯಿತಿ ವಸತಿ ಯೋಜನೆಯ ನೋಡಲ್ ಅಧಿಕಾರಿ ಕಲ್ಲೇಶ ಗುರಿಕಾರ ಅವರು, ತಮ್ಮ ಕಚೇರಿಯಲ್ಲಿ ಸ್ವಯಂ ನಿರ್ಬಂಧ ಹಾಕಿಕೊಂಡಿದ್ದಾರೆ. ತಮ್ಮ ಪುಟ್ಟ ಕೊಠಡಿಯಲ್ಲಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇಲ್ಲದಿದ್ದರೂ, ಜನರೂ ವಸತಿ ಯೋಜನೆಗೆ ಸಂಬಂಧಿಸಿದಂತೆ ಕೆಲಸ ಕಾರ್ಯಗಳಿಗಾಗಿ ಬಂದು ನಿಲ್ಲುತ್ತಿದ್ದರು. ಇದರಿಂದ ಸಾಮಾಜಿಕ ಅಂತರ ಪಾಲನೆಯಾಗುತ್ತಿರಲಿಲ್ಲ. ಇದಕ್ಕೊಂದು ಉಪಾಯ ಮಾಡಿರುವ ಅವರು, ತಮ್ಮ ಕಚೇರಿಯ ಬಾಗಿಲಿಗೆ ಪಟ್ಟಿ ಹಾಕಿಕೊಂಡಿದ್ದು, ಒಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಿ, ಅನಗತ್ಯವಾಗಿ ನಿಲ್ಲುವುದನ್ನು ತಪ್ಪಿಸಿದ್ದಾರೆ.

ನೋಡಲ್ ಅಧಿಕಾರಿಯ ಈ ವಿಶೇಷ ಐಡಿಯಾಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಕಚೇರಿಯಲ್ಲಾದ ಈ ಬದಲಾವಣೆಯಿಂದ ಸಾಮಾಜಿಕ ಅಂತರದ ಜಾಗೃತಿ ಹೆಚ್ಚಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.