ETV Bharat / state

ಹಿಂದಿನ ವರ್ಷದ ಬಸ್ ಪಾಸ್​​ ತೋರಿಸಿ ಇನ್ನೂ ತಿಂಗಳ ಕಾಲ ಪ್ರಯಾಣಿಸಿ: ವಿದ್ಯಾರ್ಥಿಗಳಿಗೆ ಶಾಸಕರ​ ಕರೆ - ಶಾಸಕ ಅಮರೇಗೌಡ ಪಾಟೀಲ್​ ಬಯ್ಯಾಪೂರ

ಬಸ್ ಚಾರ್ಜ್ ಇಲ್ಲದೆ, ಹಿಂದಿನ ವರ್ಷದ ಪಾಸ್ ತೋರಿಸಿ ಒಂದು ತಿಂಗಳ ಕಾಲ ಉಚಿತ ಪ್ರಯಾಣ ಮಾಡಲು ಅವಕಾಶವಿದೆ. ಅಲ್ಲದೆ ಹಾಸ್ಟೆಲ್ ಆರಂಭದ ಕುರಿತು ಸರ್ಕಾರದೊಂದಿಗೆ ಮನವಿ ಮಾಡುವುದಾಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಭರವಸೆ ನೀಡಿದರು.

show-the-old-bus-pass-and-travel-for-months-yet
ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ
author img

By

Published : Jan 2, 2021, 3:56 PM IST

ಕುಷ್ಟಗಿ(ಕೊಪ್ಪಳ): ಹಿಂದಿನ ವರ್ಷದ ಪಾಸ್ ತೋರಿಸಿ ಒಂದು ತಿಂಗಳ ಕಾಲ ಯಾವುದೇ ಬಸ್ ಚಾರ್ಜ್ ಇಲ್ಲದೆ ಉಚಿತ ಪ್ರಯಾಣ ಮಾಡಲು ಅವಕಾಶವಿದೆ. ಇದರ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆಯುವಂತೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.

ಕುಷ್ಟಗಿಯ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುಲಾಬಿ ಪುಷ್ಪ ನೀಡುವ ಮೂಲಕ ವಿದ್ಯಾರ್ಥಿನಿಯರನ್ನು ಶಾಲೆಗೆ ಸ್ವಾಗತಿಸಿ ಮಾತನಾಡಿದ ಶಾಸಕರು, ಹಾಸ್ಟೆಲ್ ಆರಂಭದ ಕುರಿತು ಸರ್ಕಾರದೊಂದಿಗೆ ಮನವಿ ಮಾಡುವುದಾಗಿ ಹೇಳಿದರು. ಅಲ್ಲದೆ ಪ್ರತಿಯೊಬ್ಬ ವಿದ್ಯಾರ್ಥಿ ಧೈರ್ಯವಾಗಿ ಶಾಲೆಗೆ ಬರಲು ಸುರಕ್ಷತಾ ಕ್ರಮ, ಸಮಾಜಿಕ ಅಂತರವನ್ನು ಕಾಪಾಡಿಕೊಂಡು ಉತ್ತಮವಾಗಿ ಅಧ್ಯಯನದಲ್ಲಿ ತೊಡಗಿಕೊಂಡು ಅಧ್ಯಾಪಕರ ಸಹಾಯ, ಸಹಕಾರವನ್ನು ಪಡೆದು ತಮ್ಮ ಶೈಕ್ಷಣಿಕ ಜೀವನವನ್ನು ಕಟ್ಟಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಹಳೆಯ ಬಸ್ ಪಾಸ್​ ತೋರಿಸಿ ಇನ್ನೂ ತಿಂಗಳ ಕಾಲ ಪ್ರಯಾಣಿಸಿ

ಓದಿ-26/11 ಮುಂಬೈ ದಾಳಿಯ ಪಾತಕಿ​ ಲಖ್ವಿ ಪಾಕಿಸ್ತಾನದಲ್ಲಿ ಅರೆಸ್ಟ್​

ಕೋವಿಡ್-19 ಸಂಕಷ್ಟದ ಸಮಯ ಮುಗಿತಾ ಬಂದಿದೆ. ಶಾಲೆಯ ಶೈಕ್ಷಣಿಕ ಪರಿಸರದಿಂದ ಬಹುಕಾಲ ದೂರವಿದ್ದ ವಿದ್ಯಾರ್ಥಿಗಳು ಶಾಲೆಗೆ ಬರುವಂತೆ ವಿದ್ಯಾಗಮ 2.0 ಮತ್ತು 10ನೇ ತರಗತಿಗಳು ಆರಂಭವಾಗಿವೆ. 10ನೇ ತರಗತಿಯ ಎಲ್ಲಾ ಮಕ್ಕಳು ಹಾಗೂ 6ರಿಂದ 9ನೇ ತರಗತಿಯ ವಿದ್ಯಾರ್ಥಿಗಳು ಇನ್ನು ಮುಂದೆ ಕೋವಿಡ್-19 ಭಯವಿಲ್ಲದೆ ಧೈರ್ಯವಾಗಿ ಶಾಲೆಗೆ ಬನ್ನಿ. ಆದರೆ ಹೊಸ ಅಲೆಯ ಬಗ್ಗೆಯೂ ಸದಾ ಕಾಲ ಎಚ್ಚರವಿರಲಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.