ETV Bharat / state

ಗಂಗಾವತಿಯಲ್ಲಿ ಲಸಿಕೆ ಕೊರತೆ... ಜನರ ಪರದಾಟ

author img

By

Published : May 6, 2021, 8:50 AM IST

ಗಂಗಾವತಿಯ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ಬೇಡಿಕೆ ಇದ್ದಷ್ಟು ಲಸಿಕೆ ಪೂರೈಕೆಯಾಗಿಲ್ಲ. ಬಂದವರು ಲಸಿಕೆ ಪಡೆಯದೇ ಮರಳಿ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.

shortage of Vaccine in gangavati hospital
ಲಸಿಕೆ ಕೊರತೆ

ಗಂಗಾವತಿ: ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆ ಪಡೆಯಲು ಜನರು ನಿತ್ಯ ಪರದಾಡುವ ಸ್ಥಿತಿ ನಗರದಲ್ಲಿ ನಿರ್ಮಾಣವಾಗಿದೆ.

ಲಸಿಕೆ ಕೊರತೆ - ಜನರ ಪರದಾಟ!

ಬೇಡಿಕೆ ಇದ್ದಷ್ಟು ಲಸಿಕೆ ಪೂರೈಕೆಯಾಗದ ಹಿನ್ನೆಲೆ ಲಸಿಕೆಗಳ ಕೊರತೆಯಿಂದಾಗಿ ಜನರು ನಿತ್ಯವೂ ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ಬಂದು ಲಸಿಕೆ ಪಡೆಯದೇ ಮರಳಿ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ನಾಲ್ಕೈದು ದಿನಗಳಲ್ಲಿ ಆಸ್ಪತ್ರೆಗೆ ಕೋವಿಶೀಲ್ಡ್ ಲಸಿಕೆ ಬೆರಳೆಣಿಕೆಯಷ್ಟು ಮಾತ್ರ ಪೂರೈಕೆಯಾಗಿತ್ತು. ಕೇವಲ ನೂರು ಜನರಿಗೆ ಆಗುವಷ್ಟು ಮಾತ್ರ ಲಸಿಕೆ ಪೂರೈಕೆಯಾಗಿದ್ದು, ಕೆಲವೇ ಗಂಟೆಯಲ್ಲಿ ಅದು ಮುಗಿದು ಹೋಗಿದೆ.

ಇದನ್ನೂ ಓದಿ: ಅಥಣಿಯಲ್ಲಿ ಕೊರೊನಾ ಅಬ್ಬರ: ಗಡಿ ರಸ್ತೆ ಬಂದ್ ಮಾಡುವಂತೆ ಎಸ್ಪಿ ಸೂಚನೆ

ಕೋವ್ಯಾಕ್ಸಿನ್ ಲಸಿಕೆ ಪಡೆದ ಜನರು 28 ದಿನದೊಳಗೆ ಎರಡನೇ ಡೋಸ್ ಪಡೆಯಬೇಕು ಎಂದು ಹೇಳಲಾಗಿತ್ತು. ಇದೀಗ ಅವಧಿ ಮುಗಿದಿದ್ದು, ಎರಡನೇ ಡೋಸ್​ಗಾಗಿ ಕಾಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.