ಗಂಗಾವತಿ: ನಗರದಲ್ಲಿ ರಸ್ತೆ ಅತಿಕ್ರಮಿಸಿ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದ್ದ ಗೂಡಂಗಡಿಗಳನ್ನು ನಗರಸಭೆ ಸಿಬ್ಬಂದಿ ತೆರವು ಮಾಡಿಸಿದ್ದಾರೆ.
ಕೇಂದ್ರ ಬಸ್ ನಿಲ್ದಾಣ, ನೆಹರೂ ಉದ್ಯಾನ ಹಾಗೂ ಶ್ರೀಕೃಷ್ಣದೇವರಾಯ ವೃತ್ತದ ಸುತ್ತಲೂ ಇದ್ದ ಗೂಡಂಗಡಿಗಳನ್ನು ನಗರಸಭೆ ಸಿಬ್ಬಂದಿ ಜೆಸಿಬಿ ಸಹಾಯದಿಂದ ತೆರವು ಮಾಡಿದರು. ಪಾದಚಾರಿಗಳಿಗೆ ಓಡಾಡಲು ಇದ್ದ ಮಾರ್ಗವನ್ನೇ ಗೂಡಂಗಡಿಗಳು ಆಕ್ರಮಿಸಿಕೊಂಡಿದ್ದವು. ಪೌರಾಯುಕ್ತ ಎಸ್.ಎಫ್.ಈಳಿಗೇರ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆರ್.ಆರ್.ಪಾಟೀಲ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ಮಾಡಲಾಗಿದೆ.