ETV Bharat / state

ನಿಷೇಧಿತ ಕ್ಯಾಟ್ ಫಿಶ್ ಸಾಗಾಟ: ಕೊಪ್ಪಳದಲ್ಲಿ ಇಬ್ಬರು ಆರೋಪಿಗಳ ಬಂಧನ

ಕೊಪ್ಪಳದ ಮಾರ್ಗವಾಗಿ ವಾಹನದ ಮೂಲಕ ನಿಷೇಧಿತ ಕ್ಯಾಟ್ ಫಿಶ್ ಅನ್ನು ಆರೋಪಿಗಳು ಸಾಗಾಟ ಮಾಡುತ್ತಿದ್ದರು. ಈ ಕುರಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

author img

By

Published : Jul 18, 2021, 4:46 PM IST

Koppal police arrested two accused
ಇಬ್ಬರು ಆರೋಪಿಗಳ ಬಂಧನ

ಕೊಪ್ಪಳ: ನಿಷೇಧಿತ ಕ್ಯಾಟ್ ಫಿಶ್ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಕೊಪ್ಪಳ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚನ್ನಪಟ್ಟಣದ ಮೊಹಮ್ಮದ್ ಖಾನ್ ಹಾಗೂ ಮಧ್ಯಪ್ರದೇಶದ ಜಗಲಿ ದುರ್ವೆ ಬಂಧಿತ ಆರೋಪಿಗಳು.

ಮತ್ತೊಬ್ಬ ಆರೋಪಿ ಚಿಂತಾಮಣಿಯ ಮೊಹಮ್ಮದ್ ಇರ್ಫಾನ್ ಎಂಬಾತ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಚಿಂತಾಮಣಿಯಿಂದ ಕೊಪ್ಪಳ ಜಿಲ್ಲೆಯ ಮಾರ್ಗವಾಗಿ ಇಂದೋರ್​ಗೆ ವಾಹನವೊಂದರಲ್ಲಿ ಕ್ಯಾಟ್ ಫಿಶ್​ಗಳನ್ನು ಸಾಗಾಟ ಮಾಡುತ್ತಿದ್ದರು. ಈ ವೇಳೆ ಕೊಪ್ಪಳ ಡಿವೈಎಸ್ಪಿ ಗೀತಾ ಬೇನಾಳ ಅವರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ವಾಹನ ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ: ಕೋವಿಡ್‌ ಬೆನ್ನಲ್ಲೇ ಚೀನಾದಲ್ಲಿ ಮತ್ತೊಂದು ರೋಗ ಪತ್ತೆ: 'ಮಂಕಿ ಬಿ ವೈರಸ್'​ಗೆ ಮೊದಲ ಮಾನವ ಬಲಿ

ಅಂದಾಜು 8 ಲಕ್ಷ ರೂ. ಮೌಲ್ಯದ ಆಫ್ರಿಕನ್ ಕ್ಯಾಟ್ ಫಿಶ್​ ಅನ್ನು ವಶಕ್ಕೆ ಪಡೆಯಲಾಗಿದ್ದು, ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.