ಕುಷ್ಟಗಿ (ಕೊಪ್ಪಳ): ದ್ವಿತೀಯ ಪಿಯುಸಿ ಫಲಿತಾಂಶ ಹೊರ ಬಿದ್ದಿದ್ದು, ಕುಷ್ಟಗಿ ತಾಲೂಕಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
ಸ್ಥಳೀಯ ಅರಾಳಗೌಡ್ರು ಪದವಿ ಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಸಂಗೀತಾ ಮರಳಿ, 555 ಅಂಕಗಳೊಂದಿಗೆ ಶೇ.92.50 ಪಡೆದು ಕಾಲೇಜಿಗೆ ಟಾಪರ್ ಆಗಿದ್ದು, ಶರಣಮ್ಮ ಕ್ಯಾವಟರ್, ಸವಿತಾ ಮಾಲಿಪಾಟೀಲ, ಶರಣಪ್ಪ ಕಳಕಪ್ಪ- ತಲಾ ಶೇ.91.83. ಶಂಕ್ರಮ್ಮ ಬುಕ್ನಟ್ಟಿ ಶೇ.91, ರಮೇಶ ಜವಳಗೇರಿ, ಬಸವರಾಜ್ ಎನ್. ಶೇ.90 ರಷ್ಟು ಅಂಕ ಪಡೆದಿದ್ದಾರೆ.
![Secondary PUC result](https://etvbharatimages.akamaized.net/etvbharat/prod-images/8025790_thum.jpg)
ಪಟ್ಟಣದ ಶ್ರೀ ಅನ್ನದಾನೇಶ್ವರ ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ರೇಖಾ ಗೌಡ್ರು ಅವರು, 555 ಅಂಕಗಳೊಂದಿಗೆ ಸೇ.92.50 ಅಂಕಗಳಿಸಿದ್ದಾರೆ.
ತಾಲೂಕಿನ ಕಂದಕೂರು ಗ್ರಾಮದ ಇಲಕಲ್ ಸ್ಪಂದನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರಭುದೇವ ಪತ್ತಾರ 560 ಅಂಕಗಳೊಂದಿಗೆ ಶೇ.94 ರಷ್ಟು ಹಾಗೂ ವಿಜ್ಞಾನ ವಿಭಾಗದಲ್ಲಿ, ಹಿರೇಮನ್ನಾಪುರ ಗ್ರಾಮದ ಗಂಗಾವತಿ ವಿದ್ಯಾ ನಿಕೇತನದಲ್ಲಿ ಓದುತ್ತಿರುವ ಕೌಸರಭಾನು ಗರಡಿಮನಿ 544 ಅಂಕಗಳೊಂದಿಗೆ ಶೇ.90.2 ಗಳಿಸಿದ್ದಾರೆ.