ಕುಷ್ಟಗಿ(ಕೊಪ್ಪಳ): ತಾಲೂಕಿನ 36 ಗ್ರಾ.ಪಂ.ಗಳಿಗೆ ಕೊಪ್ಪಳ ಜಿಲ್ಲಾ ವ್ಯಾಪ್ತಿಯ ಎರಡನೇ ಹಂತದ ಚುನಾವಣೆಗೆ ಒಟ್ಟು 625 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ 56 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 569 ಸ್ಥಾನಗಳಿಗೆ ಅಂತಿಮವಾಗಿ 1,461 ಸ್ಪರ್ಧಿಗಳು ಕಣದಲ್ಲಿದ್ದಾರೆ.
ತಾಲೂಕಿನ 36 ಗ್ರಾ.ಪಂ.ಗಳಲ್ಲಿ ತುಗ್ಗಲದೋಣಿ, ಹನುಮನಾಳ, ಹಿರೇಗೊಣ್ಣಾಗರ, ದೋಟಿಹಾಳ, ಮುದೇನೂರು, ಕಂದಕೂರು, ಹಿರೇಮನ್ನಾಪೂರ, ಜುಮ್ಲಾಪೂರ, ಮೆಣೆದಾಳ, ಅಂಟರಠಾಣ, ಲಿಂಗದಳ್ಳಿ, ಗುಮಗೇರಿ, ಹಾಬಲಕಟ್ಟಿ ಗ್ರಾಮ ಪಂಚಾಯಿತಿಗಳಲ್ಲಿ ತಲಾ ಒಬ್ಬರು, ಬಿಜಕಲ್, ಸಂಗನಾಳ, ತುಮರಿಕೊಪ್ಪ, ಶಿರಗುಂಪಿ ತಲಾ ಇಬ್ಬರು, ಅಡವಿಬಾವಿ, ಬೆನಕನಾಳ ತಲಾ ಮೂವರು, ನಿಲೋಗಲ್, ಯರಗೇರಾ ತಲಾ ನಾಲ್ವರು, ಹನುಮಸಾಗರ, ಜಾಗೀರಗುಡದೂರು ಹಾಗೂ ಕಿಲ್ಲಾರಹಟ್ಟಿಯಲ್ಲಿ ತಲಾ ಐವರು, ಕಬ್ಬರಗಿಯಲ್ಲಿ ತಲಾ 6 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಓದಿ: ಇನ್‌ಸ್ಟಾಗ್ರಾಂನಲ್ಲಿ ಬಾಲಕಿಯ ಸ್ನೇಹ ಬೆಳೆಸಿದ ಅಪರಿಚಿತ: ವಿದ್ಯಾರ್ಥಿನಿಗೆ ಅಶ್ಲೀಲ ವಿಡಿಯೋ ಕಳಿಸಿ ವಿಕೃತಿ
ಮಾಲಗಿತ್ತಿ, ಕಾಟಾಪೂರ, ಹೂಲಗೇರಾ,ಚಳಗೇರಾ, ಹಿರೇಬನ್ನಿಗೋಳ, ಕೊರಡಕೇರಾ. ತಳವಗೇರಾ, ಕ್ಯಾದಿಗುಪ್ಪ, ಹಿರೇನಂದಿಹಾಳ, ಕೇಸೂರು, ಬಿಳೆಕಲ್ಲ ಗ್ರಾ.ಪಂ.ಗಳಲ್ಲಿ ಯಾವುದೆ ಅವಿರೋಧ ಆಯ್ಕೆಯಾಗಿಲ್ಲ. ತಾಲೂಕಿನ 36 ಗ್ರಾ.ಪಂ.ಗಳಲ್ಲಿ ನಾಮಪತ್ರ ಸಲ್ಲಿಸಿ 478 ಜನ ಉಮೇದುವಾರಿಕೆ ಹಿಂಪಡೆದಿದ್ದಾರೆ. ಎಸ್ಸಿ- 235, ಎಸ್ಟಿ- 236, ಹಿಂದುಳಿದ ವರ್ಗ ಅ- 209, ಹಿಂದುಳಿದ ವರ್ಗ ಬ-44, ಸಾಮಾನ್ಯ 737 ಸೇರಿದಂತೆ ಒಟ್ಟು 1,461 ಜನ ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.