ETV Bharat / state

ಕುಷ್ಟಗಿಯ ಮಲ್ಲಯ್ಯ ಬಡಾವಣೆಯಲ್ಲಿ‌ ಕಳ್ಳತನ: ಚಿನ್ನ, ನಗದು ದೋಚಿದ ಕಳ್ಳರು

ಮನೆಗಳ್ಳತನ ಎಸಗಿ ಸಾವಿರಾರು ರೂ. ನಗದು ಮತ್ತು ಚಿನ್ನಾಭರಣ ದೋಚಿರುವ ಘಟನೆ ಕುಷ್ಟಗಿ ಪಟ್ಟಣದ 15ನೇ ವಾರ್ಡ್​ ವ್ಯಾಪ್ತಿಯ ಮಲ್ಲಯ್ಯ ಬಡಾವಣೆಯಲ್ಲಿ ನಡೆದಿದೆ.

kushtagi
ಕಳ್ಳತನ
author img

By

Published : Feb 26, 2021, 11:29 AM IST

ಕುಷ್ಟಗಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಳ ನುಗ್ಗಿದ ಕಳ್ಳರು ಚಿನ್ನಾಭರಣ, ನಗದು ದೋಚಿ ಪರಾರಿಯಾದ ಘಟನೆ ಪಟ್ಟಣದ 15ನೇ ವಾರ್ಡ್​ ವ್ಯಾಪ್ತಿಯ ಮಲ್ಲಯ್ಯ ಬಡಾವಣೆಯಲ್ಲಿ ನಡೆದಿದೆ.

ಹನುಮಸಾಗರ ರಸ್ತೆಯ ಸರ್ಕಾರಿ ಜ್ಯೂನಿಯರ್ ಕಾಲೇಜಿಗೆ ಹೊಂದಿಕೊಂಡಿರುವ ಮಲ್ಲಯ್ಯ ಬಡಾವಣೆಯಲ್ಲಿ ಶಂಕರಗೌಡ ಖಂಡ್ರೆ ಎಂಬುವವರು ವಾಸವಿದ್ದರು. ಖಂಡ್ರೆ ಅವರು ತಮ್ಮ ಸಂಬಂಧಿಕರ ಮನೆ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ವೇಳೆ, ಬುಧವಾರ ರಾತ್ರಿ 8.30ರ ವೇಳೆಗೆ ಮನೆಗೆ ನುಗ್ಗಿದ್ದ ಕಳ್ಳರು ಬಾಗಿಲು ಮುರಿದು, ಮನೆಯಲ್ಲಿನ ಅಲ್ಮೆರಾದಲ್ಲಿ 1.5 ತೊಲೆ ತೂಕದ ಚಿನ್ನದ ನೆಕ್ಲೆಸ್ ಸೇರಿದಂತೆ ಬೆಳ್ಳಿಯ ಆಭರಣ ಹಾಗೂ 8 ಸಾವಿರ ರೂ. ನಗದು ದೋಚಿದ್ದಾರೆ.

ಕಾರ್ಯಕ್ರಮ ಮುಗಿಸಿ ಮನೆಗೆ ವಾಪಸ್​ ಆದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆ ಕುಷ್ಟಗಿ ಪೊಲೀಸರು ದೌಡಾಯಿಸಿ ಪರಿಶೀಲಿಸಿದ್ದಾರೆ.

ಗುರುವಾರ ಬೆಳಗ್ಗೆ ಶ್ವಾನದಳದಿಂದ ಪರೀಶೀಲನೆ ನಡೆಸಲಾಗಿದೆ. ನಂತರ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.