ETV Bharat / state

ಆನೆಗೊಂದಿ ಉತ್ಸವದಲ್ಲಿ ರಾಕಿಂಗ್​ ಸ್ಟಾರ್​ ಯಶ್... ಆ ವಿಡಿಯೋ ಕಂಡು ಭಾವುಕ

author img

By

Published : Jan 11, 2020, 3:20 AM IST

Updated : Jan 11, 2020, 8:06 AM IST

ಐತಿಹಾಸಿಕ ಆನೆಗುಂದಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ರಾಕಿಂಗ್​ ಸ್ಟಾರ್​ ಯಶ್ ಅವರು ಪಾಲ್ಗೊಂಡಿದ್ದು, ಯಶೋಮಾರ್ಗ ಫೌಂಡೇಶನ್ ಮೂಲಕ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆ ಹೂಳೆತ್ತಲು ಪ್ರೇರಣೆಯಾದ ವಿಡಿಯೋವನ್ನು ಕಂಡು ಭಾವುಕರಾದರು.

yash visited historical anegundhi utsav
ರಾಕಿಂಗ್​ ಸ್ಟಾರ್​ ಯಶ್

ಕೊಪ್ಪಳ: ಐತಿಹಾಸಿಕ ಆನೆಗುಂದಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ರಾಕಿಂಗ್​ ಸ್ಟಾರ್​ ಯಶ್ ಅವರು ಪಾಲ್ಗೊಂಡು 'ನೀರಿನ ಸಂರಕ್ಷಣೆ ಹಾಗೂ ಒಳ್ಳೆಯ ಕೆಲಸಗಳನ್ನು ಮಾಡುವಂತೆ' ಕರೆ ನೀಡಿದರು.

ಐತಿಹಾಸಿಕ ಆನೆಗುಂದಿ ಉತ್ಸವಕ್ಕೆ ಆಗಮಿಸಿದ ನಟ ಯಶ್​

ನಗರದಲ್ಲಿ ನಡೆದ ಐತಿಹಾಸಿಕ ಆನೆಗುಂದಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅಭಿಮಾನಿಗಳು ಯಶ್ ಬರುತ್ತಿದ್ದಂತೆ ರಾಕಿ‌ಭಾಯ್, ರಾಜಾಹುಲಿ ಎಂದು ಘೋಷಣೆ ಕೂಗಿ ತಮ್ಮ ಅಭಿಮಾನ ವ್ಯಕ್ತಪಡಿಸಿದರು. ಅನೇಕರು ಸೆಲ್ಫಿ ಹಾಗೂ ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದರು. ಬಳಿಕ ಜಿಲ್ಲಾಡಳಿತದ ವತಿಯಿಂದ ಯಶ್ ಅವರನ್ನು ಸನ್ಮಾನಿಸಿ ಸ್ಮರಣಿಕೆ ನೀಡಲಾಯಿತು.

ಯಶೋಮಾರ್ಗ ಫೌಂಡೇಷನ್ ಮೂಲಕ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆ ಹೂಳೆತ್ತಲು ಪ್ರೇರಣೆಯಾದ ವಿಡಿಯೋವನ್ನು ಕಂಡು ಯಶ್​ ಭಾವುಕರಾದರು. 'ನಾವು ನಮ್ಮ ಕೈಲಾದಷ್ಟು ಒಳ್ಳೆಯ ಕೆಲಸ ಮಾಡುತ್ತಿರಬೇಕು' ಎಂದು ಅವರು ಕರೆ ನೀಡಿದರು.

Intro:Body:KN_KPL_01_11_YASH_PROGRAMEE_BYTE_7202284Conclusion:
Last Updated : Jan 11, 2020, 8:06 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.