ಕೊಪ್ಪಳ: ತಾಲೂಕಿನ ಹುಲಗಿ ರೈಲ್ವೆ ನಿಲ್ದಾಣದಲ್ಲಿ ಸೇನೆಯಿಂದ ಸೇವಾ ನಿವೃತ್ತಿಯಾಗಿ ಮರಳಿದ ಯೋಧ ಗುರುರಾಜ ದೇಶಪಾಂಡೆ ಅವರಿಗೆ ಕುಟುಂಬಸ್ಥರು ಹೃದಯಸ್ಪರ್ಶಿ ಸ್ವಾಗತ ಕೋರಿದರು.
ತಾಲೂಕಿನ ಹೊಸಳ್ಳಿ ಗ್ರಾಮದವರಾದ ಗುರುರಾಜ ದೇಶಪಾಂಡೆ ಕಳೆದ 24 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಸೇನೆಯಲ್ಲಿ ನಾಯಕ್ ಸುಬೇದಾರ್ ಆಗಿದ್ದ ಇವರು, 1997 ರಲ್ಲಿ ಮರಾಠ ರೆಜಿಮೆಂಟ್ಗೆ ಸೇರ್ಪಡೆಯಾಗಿ ಜಮ್ಮು ಕಾಶ್ಮೀರ, ಪಂಜಾಬ್, ಲೇಹ್ ಲಡಾಕ್, ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ ಸೇರಿದಂತೆ ವಿವಿಧೆಡೆ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ದ್ವಿತೀಯ ಪಿಯುಸಿ ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೇ ಪಾಸ್