ಗಂಗಾವತಿ: ಪ್ರವಾಸಿಗರ ನೆಚ್ಚಿನ ತಾಣ, ಧಾರ್ಮಿಕ, ಐತಿಹಾಸಿಕ ಪ್ರಮುಖ ಕೇಂದ್ರವಾದ ತಾಲೂಕಿನ ಆನೆಗೊಂದಿಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ವಿಭಿನ್ನವಾಗಿ ಕೊರೊನಾ ಕುರಿತು ಜಾಗೃತಿ ಮೂಡಿಸಲಾಯಿತು.
ಪಂಚಾಯಿತಿ ಆವರಣದಲ್ಲಿ ದೊಡ್ಡದಾಗಿ ರಂಗೋಲಿ ಬಿಡಿಸಲಾಗಿತ್ತು. ಅದರಲ್ಲಿ ನಾನಾ ಬಣ್ಣಗಳ ಮೂಲಕ ‘ಸ್ಟೇ ಹೋಮ್, ಸ್ಟೇ ಸೇಫ್ ’ ಎಂದು ಬರೆದು ಜಾಗೃತಿ ಮೂಡಿಸಲಾಗಿದೆ. ಇನ್ನು ಗ್ರಾಮ ಪಂಚಾಯಿತಿ ಆವರಣ ತಳಿರು ತೋರಣಗಳಿಂದ ಕಂಗೊಳಿಸುತ್ತಿತ್ತು.