ETV Bharat / state

ಸರ್ಕಾರಿ ಶಾಲೆಗೆ ಮಿಡಿದ ಪವರ್​ಸ್ಟಾರ್​ ಹೃದಯ: ಒಂದು ಲಕ್ಷ ರೂ. ಹಣ ನೀಡಿದ ನಟ ಪುನೀತ್ ​ರಾಜ್​ಕುಮಾರ್​ - Puneeth Rajkumar donate Rs 1 lakh

ಗಂಗಾವತಿ ತಾಲೂಕಿನ ಮಲ್ಲಾಪುರದ ಸರ್ಕಾರಿ ಶಾಲೆಯ ಮುಖ್ಯಗುರುವಿನ ಖಾತೆಗೆ ತಕ್ಷಣ ಜಮೆಯಾಗುವಂತೆ 1 ಲಕ್ಷ ರೂ. ಮೊತ್ತದ ಹಣವನ್ನು ಸಂದಾಯ ಮಾಡುವ ಮೂಲಕ ಪವರ್​ಸ್ಟಾರ್ ಪುನೀತ್ ​ರಾಜ್​ಕುಮಾರ್ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

Puneeth Rajkumar has donate Rs 1 lakh for govt school lab
ಪುನೀತ್ ​ರಾಜ್​ಕುಮಾರ್
author img

By

Published : Oct 27, 2020, 6:48 PM IST

ಗಂಗಾವತಿ: ಸದಾ ಸಮಾಜಮುಖಿ ಕಾರ್ಯಗಳಿಗೆ ಮಿಡಿಯುವ ಪವರ್​ಸ್ಟಾರ್ ಪುನೀತ್ ​ರಾಜ್​ಕುಮಾರ್, ಇದೀಗ ತಾಲೂಕಿನ ಸರ್ಕಾರಿ ಶಾಲೆಯ ವಿಜ್ಞಾನ ಪ್ರಯೋಗಾಲಯಕ್ಕೆ ನೆರವಾಗುವ ಉದ್ದೇಶಕ್ಕೆ ಸಹಾಯ ಹಸ್ತಚಾಚಿದ್ದಾರೆ.

Puneeth Rajkumar donate Rs 1 lakh for govt school lab
ಹಸ ಕಲಾವಿದರೊಂದಿಗೆ ಪುನೀತ್ ​ರಾಜ್​ಕುಮಾರ್

ತಾಲೂಕಿನ ಮಲ್ಲಾಪುರದ ಸೀಮೆಯಲ್ಲಿ ಹಮ್ಮಿಕೊಂಡಿದ್ದ ಜೇಮ್ಸ್ ಚಿತ್ರೀಕರಣಕ್ಕೆ ಆಗಮಿಸಿದ ಪುನೀತ್ ​ರಾಜ್​ಕುಮಾರ್, ಈ ಭಾಗಕ್ಕೆ ಭೇಟಿ ನೀಡಿದ್ದನ್ನು ಸ್ಮರಣೀಯವಾಗಿಸಬೇಕು, ಇದಕ್ಕಾಗಿ ಏನಾದರೂ ಒಳ್ಳೆಯ ಕೆಲಸ ಮಾಡಬೇಕು ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಅಭಿನಂದನಾ ಪತ್ರ

ಇದೇ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಗಂಗಾವತಿ ಗ್ರಾಮೀಣ ಠಾಣೆಯ ಪೊಲೀಸರು, ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಓದುತ್ತಿದ್ದಾರೆ. ಆದರೆ, ಪ್ರಯೋಗಾಲಯದ ಕೊರತೆ ಇದೆ ಎಂಬುದನ್ನು ಅವರ ಗಮನಕ್ಕೆ ತಂದಿದ್ದಾರೆ.

Puneeth Rajkumar donate Rs 1 lakh for govt school lab
ಪುನೀತ್ ​ರಾಜ್​ಕುಮಾರ್

ತಕ್ಷಣ ಸ್ಪಂದಿಸಿದ ಪುನೀತ್, ಮಲ್ಲಾಪುರ ಸರ್ಕಾರಿ ಶಾಲೆಯ ಮುಖ್ಯಗುರುವಿನ ಖಾತೆಗೆ ಜಮೆಯಾಗುವಂತೆ 1 ಲಕ್ಷ ರೂ. ಮೊತ್ತದ ಹಣವನ್ನು ಸಂದಾಯ ಮಾಡಿದ್ದಾರೆ. ಪುನೀತ್ ಕಾರ್ಯ ಇದೀಗ ಮೆಚ್ಚುಗೆಗೆ ಮಾತ್ರವಾಗಿದೆ. ಈ ಬಗ್ಗೆ ಶಾಲೆಯ ಮುಖ್ಯಗುರು ಅಭಿನಂದನಾ ಪತ್ರ ಬರೆದು ಕೃತಜ್ಞತೆ ಸಲ್ಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.