ಗಂಗಾವತಿ (ಕೊಪ್ಪಳ): ಜಿಲ್ಲೆ ಕೊರೊನಾ ವಲಯದ ಗ್ರೀನ್ ಝೋನ್ನಲ್ಲಿದೆ ಎಂಬ ಕಾರಣಕ್ಕೆ ಜನ ಮುಕ್ತವಾಗಿ ಸಂಚರಿಸುತ್ತಿದ್ದು, ಗ್ರಾಮೀಣ ಭಾಗದಲ್ಲಿ ವಾಹನ ಮತ್ತು ಜನ ಸಂಚಾರ ಹೆಚ್ಚಾಗುತ್ತಿರುವ ಹಿನ್ನೆಲೆ ಪೊಲೀಸರು ಪ್ಯಾಟ್ರೋಲಿಂಗ್ ಮಾಡಿ ಅಲರ್ಟ್ ಆಗಿರುವಂತೆ ಜನರಿಗೆ ಎಚ್ಚರಿಕೆ ನೀಡಿದರು.
![police warn people](https://etvbharatimages.akamaized.net/etvbharat/prod-images/kn-gvt-04-16-lockdown-relexetion-in-rural-police-petrolling-vis-kac10005_16042020131004_1604f_1587022804_993.jpg)
![police warn people](https://etvbharatimages.akamaized.net/etvbharat/prod-images/kn-gvt-04-16-lockdown-relexetion-in-rural-police-petrolling-vis-kac10005_16042020131004_1604f_1587022804_552.jpg)
ಗಂಗಾವತಿ ಗ್ರಾಮೀಣ ಠಾಣೆಯ ಪಿಎಸ್ಐ ಜೆ.ದೊಡ್ಡಪ್ಪ ನೇತೃತ್ವದಲ್ಲಿ ಗಸ್ತು ನಡೆಸುತ್ತಿರುವ ಪೊಲೀಸರು, ಕೆಲ ಗ್ರಾಮಗಳಲ್ಲಿ ಆರಂಭವಾಗಿದ್ದ ಅಂಗಡಿಗಳನ್ನು ಮುಚ್ಚಿಸಿದರು.
![police warn people](https://etvbharatimages.akamaized.net/etvbharat/prod-images/kn-gvt-04-16-lockdown-relexetion-in-rural-police-petrolling-vis-kac10005_16042020131004_1604f_1587022804_467.jpg)
![police warn people](https://etvbharatimages.akamaized.net/etvbharat/prod-images/kn-gvt-04-16-lockdown-relexetion-in-rural-police-petrolling-vis-kac10005_16042020131004_1604f_1587022804_1100.jpg)
![police warn people](https://etvbharatimages.akamaized.net/etvbharat/prod-images/kn-gvt-04-16-lockdown-relexetion-in-rural-police-petrolling-vis-kac10005_16042020131004_1604f_1587022804_698.jpg)
ಅನಾಗತ್ಯವಾಗಿ ಓಡಾಡುತ್ತಿದ್ದ ವಾಹನ ಸಂಚಾರಿಗಳನ್ನು ತಡೆದು ಎಚ್ಚರಿಕೆ ನೀಡಿದರು. ಬಸವಪಟ್ಟಣ, ಹೇರೂರು, ಕೇಸರಹಟ್ಟಿ, ವಡ್ಡರಹಟ್ಟಿ, ಜಂಗಮರ ಕಲ್ಗುಡಿ, ಶ್ರೀರಾಮನಗರ ಹಾಗೂ ಮರಳಿ ಮೊದಲಾದ ಗ್ರಾಮಗಳಲ್ಲಿ ಸಂಚರಿಸಿ ಜನರಲ್ಲಿ ಲಾಕ್ಡೌನ್ ಉಲ್ಲಂಘಿಸಿದರೆ ಕಾನೂನು ಕ್ರಮಕ್ಕೆ ಒಳಪಡಿಸುವುದಾಗಿ ಎಚ್ಚರಿಕೆ ನೀಡಿದರು.