ಕೊಪ್ಪಳ: ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿದೆ. ಆದ್ರೂ ಕೂಡ ನಗರದಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ ದೃಶ್ಯ ಕಂಡುಬಂದಿದ್ದು, ಪೊಲೀಸರು ವ್ಯಾಪಾರ-ವಹಿವಾಟನ್ನು ಬಂದ್ ಮಾಡಿಸಿದ್ದಾರೆ.
ಸೋಂಕು ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿದೆ. ಮೆಡಿಕಲ್ ಶಾಪ್ಗಳನ್ನು ಹೊರತುಪಡಿಸಿ ಯಾವುದೇ ರೀತಿಯ ಅಂಗಡಿಗಳನ್ನು ತೆರೆಯುವಂತಿಲ್ಲ. ಆದರೂ ಸಹ ಜನರು ಅನಗತ್ಯವಾಗಿ ಓಡಾಡುವುದು, ಹಿಂಬಾಗಿಲ ಮೂಲಕ ವ್ಯಾಪಾರ ನಡೆಸುವ ದೃಶ್ಯಗಳು ಅಲ್ಲಲ್ಲಿ ಕಂಡು ಬರುತ್ತಿದೆ. ಇಂದು ನಗರದ ಅಂಬೇಡ್ಕರ್ ಸರ್ಕಲ್ ಬಳಿ ತರಕಾರಿ, ಹಣ್ಣು ಮಾರಾಟ ಮಾಡಲಾಗುತ್ತಿತ್ತು. ಸ್ಥಳಕ್ಕೆ ಬಂದ ಪೊಲೀಸರು ಅಂಗಡಿಗಳನ್ನು ಬಂದ್ ಮಾಡಿಸಿದರು.
ಪೊಲೀಸ್ ಕಾರ್ಯಾಚರಣೆ:
ಸಂಪೂರ್ಣ ಲಾಕ್ಡೌನ್ನ ಐದನೇ ದಿನವಾದ ಇಂದೂ ಸಹ ಪೊಲೀಸರು ಬೆಳಗ್ಗೆಯೇ ಫೀಲ್ಡಿಗಿಳಿದಿದ್ದಾರೆ. ಅನವಶ್ಯಕವಾಗಿ ಓಡಾಡುತ್ತಿದ್ದವರನ್ನು ತಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬಳ್ಳಾರಿ-ವಿಜಯನಗರದಲ್ಲಿ ಮೇ 24 ರಿಂದ SSLC ಪೂರ್ವ ಸಿದ್ಧತಾ ಪರೀಕ್ಷೆ
ಪೂಜೆಗೆ ಹೋಗುತ್ತಿದ್ದ ಪೂಜಾರಿಯ ಗಾಡಿ ಸೀಜ್ ಮಾಡುವುದಾಗಿ ಪೊಲೀಸರು ಹೇಳಿದ್ದರಿಂದ ಪೂಜಾರಿ ವಾಪಸ್ ಮನೆಗೆ ಹೊರಟು ಹೋದರು. ಇದೇ ವೇಳೆ, ಅಂತ್ಯಸಂಸ್ಕಾರಕ್ಕೆ ಹೊರಟಿದ್ದ ಬೈಕ್ ಸವಾರರನ್ನು ತಡೆದು ವಿಚಾರಿಸಿ ಬಳಿಕ ಕಳುಹಿಸಿದರು. ಲಾಕ್ಡೌನ್ನ ಐದನೇ ದಿನವಾದ ಇಂದು ವಾಹನಗಳ ಸಂಚಾರ ವಿರಳವಾಗಿದೆ.