ಕುಷ್ಟಗಿ(ಕೊಪ್ಪಳ): ತಾಲೂಕಿನ ಪರಿಶಿಷ್ಟ ಜಾತಿ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ 66 ಮಂದಿ ಹಾಗೂ ಪ.ಜಾ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ 59 ಮಂದಿ ಸೇರಿದಂತೆ ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದ ಒಟ್ಟು 125 ಜನರ ಸ್ವ್ಯಾಬ್ ಟೆಸ್ಟ್ ವರದಿ ನೆಗೆಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆ ದೃಢೀಕರಿಸಿದೆ.
ಎಲ್ಲರ ವರದಿ ನೆಗೆಟಿವ್ ಬಂದಿರುವ ಹಿನ್ನೆಲೆ ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದ ಎಲ್ಲರನ್ನೂ ಶನಿವಾರ ಸಂಜೆ ಬಿಡುಗಡೆ ಮಾಡಲಾಗಿದೆ. ಪ್ರಮುಖವಾಗಿ ಮಹಾರಾಷ್ಟ್ರದಿಂದ ಆಗಮಿಸಿದ್ದ ಅನೇಕರನ್ನು ಕ್ವಾರಂಟೈನ್ನಲ್ಲಿಡಲಾಗಿತ್ತು. ಮೇ 14ರಂದು ಆಗಮಿಸಿದ್ದ ಮಾಲಗಿತ್ತಿಯ ವ್ಯಕ್ತಿಗೆ ಕೊರೊನಾ ಸೋಂಕು (ರೋಗಿ ಸಂಖ್ಯೆ 1173) ದೃಢವಾಗಿದ್ದರಿಂದ, ಈ ಕ್ವಾರಂಟೈನ್ನಲ್ಲಿದ್ದವರಿಗೆ ಭಯ ಕಾಡತೊಡಗಿತ್ತು. ಆದ್ದರಿಂದ ಕ್ವಾರಂಟೈನ್ನಲ್ಲಿದ್ದ ಎಲ್ಲರಿಗೂ ಸ್ವ್ಯಾಬ್ ಟೆಸ್ಟ್ ಮಾಡಲಾಗಿತ್ತು ಶುಕ್ರವಾರ ಇವರೆಲ್ಲರ ವರದಿ ನೆಗೆಟಿವ್ ಬಂದಿರುವುದರಿಂದ ಇಂದು ಎಲ್ಲರನ್ನೂ ಅವರವರ ಗ್ರಾಮಗಳಿಗೆ ಕಳಿಸಿಕೊಡುವ ವ್ಯವಸ್ಥೆ ಮಾಡಲಾಯಿತು.
ಈ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ವೆಂಕಟಾಪುರ ತಾಂಡಾದ 29 ಜನ, ಗುಡ್ಡದದೇವಲಾಪುರದ 21, ಹನುಮಸಾಗರ, ಚಳಗೇರಿಯ ತಲಾ ಇಬ್ಬರು, ಜಾರ್ಖಂಡ್ನ ಒಬ್ಬರು, ಮಾಲಗಿತ್ತಿಯ 3 ಮಂದಿ ಹಾಗೂ ಮ್ಯಾದರಡೊಕ್ಕಿ ತಾಂಡಾದ 59 ಜನರನ್ನು ಅವರವರ ಗ್ರಾಮಗಳಿಗೆ ಕಳಿಸಿಕೊಡಲಾಯಿತು.
ಈ ವೇಳೆ ತಹಶೀಲ್ದಾರ್ ಎಂ. ಸಿದ್ದೇಶ್, ತಾಲೂಕು ವೈದ್ಯಾಧಿಕಾರಿ ಡಾ. ಆನಂದ ಗೋಟೂರು, ವಾರ್ಡನ್ ದ್ಯಾಮಣ್ಣ ಕರೇಕಲ್, ಕಿರಿಯ ವಾರ್ಡನ್ ಬಸವರಾಜ್ ಆಸಾಪೂರ, ಸುರೇಶ ಪಾಟೀಲ, ಮೀನಾಕ್ಷಿ ಜೋಷಿ, ಮಾನಪ್ಪ ಪವಾರ್, ಲಕ್ಷ್ಮಣ ಕಟ್ಟಿಮನಿ ಹಾಗೂ ಇನ್ನಿತರರಿದ್ದರು.