ಕೊಪ್ಪಳ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಲೇ ಇದ್ದರೂ ಜನರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಕೊರೊನಾ ನಿಯಮಗಳನ್ನು ಉಲ್ಲಂಘಸಿ ಗುಂಪು ಸೇರುತ್ತಿದ್ದಾರೆ.
ಕೊಪ್ಪಳ ನಗರದ ಮಾರುಕಟ್ಟೆಯಲ್ಲಿ 10 ಗಂಟೆಯ ನಂತರವೂ ವ್ಯಾಪಾರ ಜೋರಾಗಿತ್ತು. ನಾಳೆ ರಂಜಾನ್ ಹಿನ್ನೆಲೆಯಲ್ಲಿ ಜನರು ಸಾಮಾಜಿಕ ಅಂತರ ಮರೆತು ಹಬ್ಬದ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು.
ನಗರದ ಎಲ್ಲಾ ರಸ್ತೆಗಳು ಜನಜಂಗುಳಿ ಹಾಗೂ ವಾಹನಗಳಿಂದ ತುಂಬಿದ್ದವು. ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿರುವುದು ಕಂಡುಬಂತು.
ಓದಿ: ಆಕ್ಸಿಜನ್ ಕೊರತೆ ಚಾಮರಾಜನಗರ ದುರಂತಕ್ಕೆ ಕಾರಣ; ಡಿಸಿ ರೋಹಿಣಿ ಸಿಂಧೂರಿಗೆ ಕ್ಲೀನ್ಚಿಟ್