ಗಂಗಾವತಿ: ಗ್ರಾ. ಪಂಚಾಯಿತಿ ಚುನಾವಣೆ ವೇಳೆ ಮತದಾರರರಿಗೆ ಕೊಟ್ಟ ಭರವಸೆಯಂತೆ, ಚುನಾಯಿತ ಸದಸ್ಯರು ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ಬಾಡೂಟ ಹಾಕಿಸಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.
ಓದಿ: ಬೆಂಗಳೂರಿನ ಆಸ್ಟರ್ ಆಸ್ಪತ್ರೆಗೆ ಡಿ.ವಿ.ಸದಾನಂದ ಗೌಡ ದಾಖಲು
ವಡ್ಡರಹಟ್ಟಿ ಗ್ರಾಮ ಪಂಚಾಯಿತಿಯ 5ನೇ ವಾರ್ಡ್ನ ಸದಸ್ಯರಾದ ಹುಲಿಗೆಮ್ಮ ರಮೇಶ ಕಾಳಿ, ಹುಸೇನಪ್ಪ ಅಮರಪ್ಪ ಹಾಗೂ ಸುನಿತಾ ವೆಂಕಟೇಶ ಗೌಡ ತಮ್ಮ ವಾರ್ಡ್ನ ಮತದಾರರಿಗೆ ಬಾಡೂಟ ಹಾಕಿಸಿದರು. ಈ ಮೂಲಕ ಮತದಾರರನ್ನು ಗೌರವಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.