ಕುಷ್ಟಗಿ(ಕೊಪ್ಪಳ): ರಾಯಚೂರು ಡಿಎಸ್ ಬಿ.ನಿಂಗಪ್ಪ ಎನ್ ರುದ್ರಪ್ಪಗೋಳ್ ಅವರು ಕುಷ್ಟಗಿ ಸಿಪಿಐ ಆಗಿ ವರ್ಗಾವಣೆಗೊಂಡಿದ್ದಾರೆ.
ಇನ್ನು ಕುಷ್ಟಗಿ ಸಿಪಿಐ ಆಗಿ ಸೇವೆಯಲ್ಲಿದ್ದ ಜಿ. ಚಂದ್ರಶೇಖರ ಅವರನ್ನು ರಾಯಚೂರು ಡಿಎಸ್ಬಿ ಆಗಿ ನೇಮಕ ಮಾಡಲಾಗಿದೆ.
ಇವರು ಸಿಪಿಐ ಸೇವೆಯಲ್ಲಿ ಹಲವು ರಚನಾತ್ಮಕ ಕಾರ್ಯಗಳಿಂದ ಜನ ಮೆಚ್ಚುಗೆ ಗಳಿಸಿದ್ದರು. ಶಿಕ್ಷಣ ಪ್ರೇಮಿಯಾಗಿ ಶಾಲೆ ಹಾಗೂ ಪೊಲೀಸ್ ಠಾಣೆಗೆ ಸಾಮಾಜಿಕ ಅರಿವು ಮೂಡಿಸುವ ಚಿತ್ರಗಳನ್ನು ಚಿತ್ರಿಸುವ ಮೂಲಕ ಜನ ಜಾಗೃತಿ ಮೂಡಿಸಿದ್ದರು.