ಕೊಪ್ಪಳ: ಅನಾರೋಗ್ಯಕೀಡಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ದುರ್ಗಮ್ಮಳ ಸ್ಥಿತಿಗೆ ಅನೇಕರು ಮರುಗಿದ್ದಾರೆ. ಅಲ್ಲದೆ ಅನೇಕರು ಸಹಾಯ ಹಸ್ತ ಚಾಚಿದ್ದಾರೆ. ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ದುರ್ಗಮ್ಮ ಚಿಕಿತ್ಸೆಗಾಗಿ 10 ಸಾವಿರ ರೂಪಾಯಿ ನೀಡಿದ್ದಾರೆ.
ಅಲ್ಲದೇ, ಮಾಜಿ ಡಿಸಿಎಂ ಆರ್. ಅಶೋಕ್ ಅವರು ಮಗುವಿನ ಶಿಕ್ಷಣ ವೆಚ್ಚವನ್ನು ಭರಿಸುವುದಾಗಿ ವಾಗ್ದಾನ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಅಮರೇಶ್ ಕರಡಿ ಅವರು ತಿಳಿಸಿದ್ದಾರೆ. ಅನಾರೋಗ್ಯಪೀಡಿತ ತಾಯಿಯ ಅರೈಕೆ ಮಾಡುತ್ತಿರುವ 6 ವರ್ಷದ ಬಾಲಕಿ ಭಾಗ್ಯಶ್ರೀ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಬಳಿಕ ಸಂಸದ ಸಂಗಣ್ಣ ಕರಡಿ ಅವರ ಪುತ್ರ ಜಿಲ್ಲಾ ಪಂಚಾಯತ್ ಸದಸ್ಯ ಗವಿಸಿದ್ದಪ್ಪ ಕರಡಿ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ರಾಮಣ್ಣ ಚೌಡ್ಕಿ ಸೇರಿದಂತೆ ಮೊದಲಾದವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ದುರ್ಗಮ್ಮಳ ಆರೋಗ್ಯ ವಿಚಾರಿಸಿ ಹಣಕಾಸಿನ ಸಹಾಯ ಮಾಡಿದರು. ಇದಲ್ಲದೆ ತಾಯಿ ಮಗಳಿಗೆ ಬಟ್ಟೆ ಸೇರಿದಂತೆ ಹಣ್ಣು ಹಂಪಲು ನೀಡಿದರು.
ಇನ್ನು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೆ. ರಾಜಶೇಖರ್ ಹಿಟ್ನಾಳ್ ಅವರು ಸಹ ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆ ದುರ್ಗಮ್ಮಗೆ ಸಹಾಯ ನೀಡಿದರು.