ಕುಷ್ಟಗಿ: ಸಾಂಸ್ಥಿಕ ಕ್ವಾರಂಟೈನ್ ಆಗಿದ್ದ ಪಟ್ಟಣದ ಹೊರವಲಯದ ಮೆಟ್ರಿಕ್ ಪೂರ್ವ ವಸತಿ ನಿಲಯವನ್ನು ಭಾನುವಾರ ಕ್ರಿಮಿನಾಶಕನಿಂದ ಸ್ವಚ್ಛಗೊಳಿಸಲಾಯಿತು.
ಲಾಕ್ಡೌನ್ ಸಂದರ್ಭದಲ್ಲಿ ಮಾ. 31ರಿಂದ ಮೇ 3ರ ವರೆಗೂ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಉತ್ತರ ಪ್ರದೇಶದ 108 ಜನರ ನಿರಾಶ್ರಿತರ ಕೇಂದ್ರವಾಗಿತ್ತು. ನಂತರ ಮಹಾರಾಷ್ಟ್ರ ಸೇರಿದಂತೆ ಇತರೆಡೆಯಿಂದ ಕುಷ್ಟಗಿ ತಾಲೂಕಿನ ವಲಸೆ ಕಾರ್ಮಿಕರು ಆಗಮಿಸುತ್ತಿದ್ದಂತೆ 36 ಕೊಠಡಿಗಳ ಈ ಕಟ್ಟಡವನ್ನು ಸಾಂಸ್ಥಿಕ ಕ್ವಾರಂಟೈನ್ ಆಗಿ ಪರಿವರ್ತಿಸಲಾಗಿತ್ತು.
ಮೇ 12ರಿಂದ ಒಟ್ಟು 67 ಜನ ಈ ಕ್ವಾರಂಟೈನ್ನಲ್ಲಿದ್ದು ಮೇ 23 ರಂದು ಡಿಸ್ಚಾರ್ಜ್ ಆಗಿದ್ದಾರೆ. ಮೇ 14 ರಂದು ಇದೇ ಕ್ವಾರಂಟೈನ್ನಲ್ಲಿದ್ದ ವ್ಯಕ್ತಿಗೆ (ರೋಗಿ ಸಂಖ್ಯೆ -1173) ಕೊರೊನಾ ಸೋಂಕು ದೃಢವಾಗಿ ಆತಂಕ ಸೃಷ್ಟಿಸಿತ್ತು. ಸದ್ಯ ವಸತಿ ನಿಲಯ ಖಾಲಿಯಾಗಿದ್ದು, ಈ ಹಿನ್ನೆಲೆಯಲ್ಲಿ ಭಾನುವಾರ ಪುರಸಭೆ ವತಿಯಿಂದ 2 ಟ್ಯಾಂಕರ್ಗಳ ಸಹಾಯದಿಂದ ಕ್ರಿಮಿನಾಶಕ ಸಿಂಪಡಿಲಾಯಿತು.