ಗಂಗಾವತಿ (ಕೊಪ್ಪಳ): ಶಾಲಾ-ಕಾಲೇಜು ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದು, ನಗರದಲ್ಲಿ ಅತೀ ಶೀಘ್ರ ಸಿಟಿ ಬಸ್ ಸಂಚಾರಕ್ಕೆ ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಿ ಸೇವೆ ಆರಂಭಕ್ಕೆ ಯತ್ನಿಸುವುದಾಗಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಈ ಕುರಿತಂತೆ ಫೆ.1ರಂದು ಈಟಿವಿ ಭಾರತ ವರದಿ ಪ್ರಕಟಿಸಿತ್ತು, ‘ಬಸ್ ಕೊರತೆ.. ಜೀವದ ಹಂಗು ತೊರೆದು ಜೋತಾಡುತ್ತಾ ಪ್ರಯಾಣಿಸುವ ವಿದ್ಯಾರ್ಥಿಗಳು’ ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಸಾರವಾದ ಹಿನ್ನೆಲೆ ಪ್ರತಿಕ್ರಿಯಿಸಿದ ಶಾಸಕರು, ಆದಷ್ಟು ತ್ವರಿತವಾಗಿ ಎಲ್ಲಾ ಭಾಗಕ್ಕೂ ಬಸ್ ಸಂಚಾರದ ವ್ಯವಸ್ಥೆ ಮಾಡಲಾಗುವುದು ಎಂದರು.
ಮುಖ್ಯವಾಗಿ ನಗರದಲ್ಲಿ ಸಿಟಿ ಬಸ್ ಸಂಚಾರವಾದರೆ ಡಿಗ್ರಿ ಕಾಲೇಜು, ಎಂಎನ್ಎಂ ಸೇರಿದಂತೆ ನಾನಾ ಭಾಗದ ವಿದ್ಯಾರ್ಥಿಗಳ ಮತ್ತು ಪ್ರಯಾಣಿಕರ ಸಮಸ್ಯೆ ಇತ್ಯರ್ಥವಾಗುತ್ತದೆ. ಈ ನಿಟ್ಟಿನಲ್ಲಿ ಸಂಬಂಧಿತರೊಂದಿಗೆ ಚರ್ಚಿಸಲಾಗುವುದು ಎಂದರು.
ಇದನ್ನೂ ಓದಿ: ಬಸ್ ಕೊರತೆ.. ಜೀವದ ಹಂಗು ತೊರೆದು ಜೋತಾಡ್ತಾ ಪ್ರಯಾಣಿಸುವ ವಿದ್ಯಾರ್ಥಿಗಳು..