ETV Bharat / state

ಪ್ರತಿಯೊಬ್ಬ ಮನುಷ್ಯನಿಗೂ ಡ್ರಗ್ಸ್ ಅವಶ್ಯಕತೆ ಇದೆ: ಶಾಸಕ ಅಮರೇಗೌಡ ಪಾಟೀಲ್

ಪ್ರತಿಯೊಬ್ಬ ಮನುಷ್ಯನಿಗೂ ಡ್ರಗ್ಸ್ ನ ಅವಶ್ಯಕತೆ ಇದೆ ಎಂದು ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ

MLA Amaregowda  patil controversial statement
ಶಾಸಕ ಅಮರೇಗೌಡ ಪಾಟೀಲ್ ವಿವಾದಾತ್ಕಕ ಹೇಳಿಕೆ
author img

By

Published : Oct 3, 2020, 4:26 PM IST

ಕೊಪ್ಪಳ: ಪ್ರತಿಯೊಬ್ಬ ಮನುಷ್ಯನಿಗೂ ಡ್ರಗ್ಸ್ ಅವಶ್ಯಕತೆ ಇದೆ ಎಂದು ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಶಾಸಕ ಅಮರೇಗೌಡ ಪಾಟೀಲ್ ವಿವಾದಾತ್ಮಕ ಹೇಳಿಕೆ

ಕೊಪ್ಪಳದಲ್ಲಿ ಮಾತನಾಡಿದ ಅವರು, ಡ್ರಗ್ಸ್ ಎಂದರ ಅದು ನಶೆ ಏರಿಸುವ ವಸ್ತು, ಹಿಂದಿನ ರಾಜ ಮಹಾರಾಜರ ಕಾಲದಿಂದ ಬಂದಿದೆ. ಡ್ರಗ್ಸ್ ನ ಬೇರೆ ಬೇರೆ ವೆರೈಟಿಗಳನ್ನು ಈಗ ಕಂಡು ಹಿಡಿದಿದ್ದಾರೆ. ಡ್ರಗ್ಸ್ ವಿಷಯಕ್ಕೆ ಸಂಬಂಧಿಸಿದಂತೆ ನಟಿಯರನ್ನು ಹೆಚ್ಚು ಉಪಯೋಗ ಮಾಡಿದ್ದು ತಪ್ಪು. ಸರ್ಕಾರ ಹಾಗೂ ಮಾಧ್ಯಮ ಇದನ್ನು ಮಾಡಬಾರದಾಗಿತ್ತು. ನಟಿಯರು ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿದ್ದರೂ ಅವರು ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಸಿನಿಮಾ ಮಾಡಿದ್ದಾರೆ. ಅವರಿಗೂ ನಾವು ಗೌರವ ಕೊಡಬೇಕು. ಅದರ ಜೊತೆಗೆ ಅವರಿಗೆ ಗೌಪ್ಯವಾಗಿ ಶಿಕ್ಷೆ ಕೊಡಬೇಕು ಎಂದರು.

ನನ್ನನ್ನೂ ಸೇರಿದಂತೆ ಎಲ್ಲ ರಾಜಕಾರಣಿಗಳಿಗೂ ವೈಯಕ್ತಿಕವಾಗಿ ಕೆಲವು ಅಭ್ಯಾಸಗಳಿರುತ್ತವೆ. ಎಲ್ಲೋ ಒಬ್ಬರು ಮಹಾತ್ಮಗಾಂಧಿ ಅಂತವರು ಇದ್ದರೆ, ಏನು ಮಾಡೋಕೆ ಆಗುತ್ತೆ. ಡ್ರಗ್ಸ್ ವಿಚಾರದಲ್ಲಿ ಈಗ ಜಾಗೃತಿ ಬಂದಿದೆ. ಈ ವಿಷಯವನ್ನು ಇಲ್ಲಿಗೆ ಬಿಟ್ಟು ಮಾಧ್ಯಮಗಳು ಬೇರೆ ವಿಷಯ ಸೃಷ್ಟಿ ಮಾಡಬೇಕು. ಮನುಷ್ಯ ಎಂದ ಮೇಲೆ ರಾಜಕಾರಣಿಗಳು ಸೇರಿ ಎಲ್ಲರೂ ಯಾವುದಾದರೊಂದರಲ್ಲಿ ಭಾಗಿಯಾಗಿದ್ದಾರೆ. ನಾನು ಅದರಲ್ಲಿ ಇದ್ದರೆ ನಾನೂ ಬರಬೇಕಾಗುತ್ತದೆ. ನಾನು ಅಫೀಮ್, ಸಿಗರೇಟ್ ಸೇದುವವನು ಅಲ್ಲ ಹಾಗೂ ಕ್ಲಬ್ ಗೆ ಹೋಗುವವನೂ ಅಲ್ಲ, ನನ್ನ ಮೇಲೆ ಆರೋಪ ಇದ್ದರೆ ಅದು ಹೊರಗೆ ಬರಲಿ ಎಂದ್ರು.

ಇನ್ನು ಇದೇ ವೇಳೆ, ಹಳೆ ತೆಲೆಮಾರಿನ ರಾಜಕಾರಣಿಗಳಿಗೆ ಅವಕಾಶಗಳು ಕಡಿಮೆ ಇದ್ದವು. ಹೊಸ ತೆಲೆ ಮಾರಿನ ರಾಜಕಾರಣಿಗಳಿಗೆ ಅವಕಾಶಗಳು ಹೆಚ್ಚಾಗಿವೆ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.