ETV Bharat / state

ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತೇನೆ : ತಂಗಡಗಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವನಾಗಿ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸುವ ಮತ್ತು ಬೆಳೆಸುವ ಕೆಲಸ ಮಾಡುತ್ತೇನೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

minster-shiavaraj-tangadagi-spoke-ay-gangavathi
ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತೇನೆ : ತಂಗಡಗಿ
author img

By

Published : Jun 4, 2023, 10:42 PM IST

ಗಂಗಾವತಿ (ಕೊಪ್ಪಳ) : ಇದುವರೆಗೂ ಕೇವಲ ದಕ್ಷಿಣ ಕರ್ನಾಟಕ ಅದರಲ್ಲೂ ಕರಾವಳಿ ಭಾಗಕ್ಕೆ ಸೀಮಿತವಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕಕ್ಕೆ ಸಿಕ್ಕಿದೆ. ಅದರಲ್ಲೂ ಕಲ್ಯಾಣ ಕರ್ನಾಟಕದ ಭಾಗಕ್ಕೆ ಸಿಕ್ಕಿರುವುದು ನಮ್ಮ ಭಾಗ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.

ಕಾರಟಗಿ ಪಟ್ಟಣದ ತಮ್ಮ ನಿವಾಸದಲ್ಲಿ ಕನ್ನಡ ಸಾಹಿತ್ಯ ಪರಿತ್ತಿನ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ನೇತೃತ್ವದಲ್ಲಿ ಕಾರಟಗಿ, ಗಂಗಾವತಿ ಮತ್ತು ಕನಕಗಿರಿ ತಾಲ್ಲೂಕು ಘಟಕದಿಂದ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮುಖ್ಯಮಂತ್ರಿ ನನ್ನ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡು ಈ ಖಾತೆಯನ್ನು ನೀಡಿದ್ದಾರೆ. ಸಿಎಂ ಮತ್ತು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕಾದ ಸವಾಲು ನನ್ನ ಮುಂದಿದೆ. ಅಲ್ಲದೇ ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕದವರಿಗೆ ಖಾತೆ ಸಿಕ್ಕಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಖಾತೆ ಸಿಕ್ಕ ಬಳಿಕ ನಾಡಿನ ನಾನಾ ಭಾಗದಿಂದ ಸಾಹಿತಿಗಳು, ಲೇಖಕರು, ಚಿಂತಕರು, ಬುದ್ಧಿಜೀವಿಗಳು ನನಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿ ಸಾಕಷ್ಟು ಸಲಹೆ ನೀಡಿದ್ದಾರೆ. ಇದೆಲ್ಲವನ್ನೂ ಕಾರ್ಯಗತ ಮಾಡಬೇಕಾದ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ ಎಂದು ಹೇಳಿದರು.

ಈ ಇಲಾಖೆ ಬಹು ದೊಡ್ಡದು. ಈ ಇಲಾಖೆಗೆ ತಾಲ್ಲೂಕು ಹಂತದಲ್ಲಿ ಅಧಿಕಾರಿಗಳಿಲ್ಲ. ಆದರೆ ಈ ಇಲಾಖೆಯ ವ್ಯಾಪ್ತಿಗೆ ಕಸಾಪ ಸೇರಿದಂತೆ ನಾಲ್ಕು ಪ್ರಾಧಿಕಾರ, ಹದಿನಾಲ್ಕು ಅಕಾಡೆಮಿಗಳಿವೆ. ಆರು ಗಡಿನಾಡು ಬರುತ್ತವೆ. ಎರಡೂವರೆ ಗಂಟೆಗೂ ಹೆಚ್ಚು ಕಾಲ ಅಧಿಕಾರಿಗಳೊಂದಿಗೆ ಇತ್ತೀಚೆಗೆ ಪರಿಶೀಲನೆ ಮಾಡಿದ್ದೇನೆ. ಇಷ್ಟು ದೊಡ್ಡ ಇಲಾಖೆಯನ್ನು ನಿಭಾಯಿಸುವುದು ನಿಜಕ್ಕೂ ಸವಾಲಿನ ಕೆಲಸ. ಕೇವಲ ಈ ಕೆಲಸ ನನ್ನಿಂದ ಒಬ್ಬನಿಂದ ಆಗದು. ನಿಮ್ಮೆಲ್ಲರ ಸಹಕಾರ ಮುಖ್ಯವಾಗಿ ಕಸಾಪ ಸಹಕಾರ ಮುಖ್ಯ. ಕಸಾಪದ ಬಹುತೇಕ ಘಟಕಗಳಲ್ಲಿ ಶಿಕ್ಷಕರು, ಬುದ್ಧಿಜೀವಿಗಳು, ಮಾಧ್ಯಮ ಮಿತ್ರರು ಪ್ರತಿನಿಧಿಗಳಾಗಿದ್ದೀರಿ. ನೀವು ಸಲಹೆ ನೀಡಬೇಕು ಎಂದು ಹೇಳಿದರು.

ನಡೆಯುವವನು ಮಾತ್ರ ಎಡವಬಲ್ಲ. ಹೀಗೆ ಎಡವಿದಾಗ ಎಚ್ಚರಿಸುವ ಕೆಲಸವನ್ನು ನೀವು ಮಾಡಬೇಕು. ಜನರ ನಿರೀಕ್ಷೆ, ಭರವಸೆಗಳನ್ನು ಈಡೇರಿಸುವ ಪ್ರಮಾಣಿಕ ಯತ್ನ ಮಾಡುತ್ತೇನೆ. ಈಗಾಗಲೇ ಮೂರು ಬಾರಿ ಮಂತ್ರಿಯಾಗಿದ್ದರೂ ಕೂಡ ನಾನು ಇನ್ನೂ ಸಣ್ಣವನು. ಹೀಗಾಗಿ ಎಲ್ಲರ ಸಹಕಾರ ಅಗತ್ಯ. ನಾಡಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸುವ ಮತ್ತು ಬೆಳೆಸುವ ಕೆಲಸ ಮಾಡುತ್ತೇನೆ. ಆದಷ್ಟು ತ್ವರಿತವಾಗಿ ಸಾಹಿತಿಗಳ, ಚಿಂತಕರ, ಬುದ್ಧಿಜೀವಿಗಳ ಸಭೆ ಕರೆಯುತ್ತೇನೆ. ಬಳಿಕ ಕಸಾಪದ ಪದಾಧಿಕಾರಿಗಳ ಸಭೆಯನ್ನು ಮೊದಲಿಗೆ ರಾಜ್ಯಮಟ್ಟದಲ್ಲಿ ಬಳಿಕ ಜಿಲ್ಲಾ ಹಂತದಲ್ಲಿ ಸಭೆ ಮಾಡುತ್ತೇನೆ ಎಂದು ಸಚಿವ ತಂಗಡಗಿ ಹೇಳಿದರು.

ಇದನ್ನೂ ಓದಿ : ಆರ್ಥಿಕ ಸಂಕಷ್ಟದ ನಡುವೆಯೂ ಹೊಸದಾಗಿ 50 ಇಂದಿರಾ ಕ್ಯಾಂಟೀನ್​ಗಳನ್ನು ತೆರೆಯಲು ಮುಂದಾದ ಪಾಲಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.