ETV Bharat / state

ಶಿಥಿಲಗೊಂಡ ವಿನಿ ವಿಧಾನಸೌಧ ಕಟ್ಟಡದ ಪ್ರವೇಶ ದ್ವಾರ: ಅಧಿಕಾರಿಗಳ ನಿರ್ಲಕ್ಷ್ಯ ಆರೋಪ - vidhan soudha Complex building

ಕುಷ್ಟಗಿ ತಾಲೂಕಿನ ಮಿನಿ ವಿಧಾನಸೌಧ ಸಂಕೀರ್ಣ ಕಟ್ಟಡದ ಪ್ರವೇಶ ದ್ವಾರವು ಶಿಥಿಲಗೊಂಡಿದ್ದು, ಇದನ್ನು ಸರಿಪಡಿಸಲು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

kushtagi
ಮಿನಿ ವಿಧಾನ ಸೌಧ ಸಂಕೀರ್ಣ ಕಟ್ಟಡ
author img

By

Published : May 10, 2020, 12:54 PM IST

ಕುಷ್ಟಗಿ(ಕೊಪ್ಪಳ): ತಾಲೂಕಿನ ಮಿನಿ ವಿಧಾನಸೌಧ ಸಂಕೀರ್ಣ ಕಟ್ಟಡದ ಪ್ರವೇಶ ದ್ವಾರವು ಶಿಥಿಲಗೊಂಡಿದ್ದು, ಅಧಿಕಾರಿಗಳು ಇದನ್ನು ಸರಿಪಡಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ.

ಈ ಮಿನಿ ವಿಧಾನಸೌಧ ಸಂಕೀರ್ಣ ಕಟ್ಟಡದ ದುಸ್ಥಿತಿ ಬೆಳಕಿಗೆ ಬಂದು ಹಲವು ತಿಂಗಳುಗಳಾದರೂ ಸಂಬಂಧಿಸಿದ ಅಧಿಕಾರಿಗಳು ಸರಿಪಡಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಕೊರೊನಾ ಲಾಕ್‌ಡೌನ್ ಹೊರತಾದ ದಿನಗಳಲ್ಲಿ ನೂರಾರು ಸಾರ್ವಜನಿಕರು, ಚಳುವಳಿಕಾರರು ಇದರಡಿ ನಡೆದಾಡುವುದು, ನಿಲ್ಲುವುದು ಇದ್ದೇ ಇರುತ್ತದೆ. ಆದರೂ ಈ ಅಪಾಯದ ಮುನ್ಸೂಚನೆ‌ ಕಣ್ಣಿಗೆ ಬಿದ್ದರೂ ಅಧಿಕಾರಿ ವರ್ಗ ಸರಿಪಡಿಸಲು ಮುಂದಾಗುತ್ತಿಲ್ಲ.

ಶಿಥಿಲಗೊಂಡಿರುವ ಮಿನಿ ವಿಧಾನ ಸೌಧ ಸಂಕೀರ್ಣ ಕಟ್ಟಡ

ಈ ಕಟ್ಟಡ ಬಿರುಕು ಬಿಟ್ಟಿದ್ದು, ಜೋತಾಡುವ ಕಾಂಕ್ರೀಟ್ ಪದರವನ್ನು ತೆಗೆದು ಸರಿಪಡಿಸಿ ಮುಂದೆ ಸಂಭವಿಸಬಹುದಾದ ಅಪಾಯ ತಪ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.