ETV Bharat / state

ಶಾಸಕರ ಪುತ್ರನ ಹೆಸರಲ್ಲಿ ಯುವತಿಗೆ ವಂಚಿಸಿದ ಖದೀಮನ ಸೆರೆ - Man arrested for cheating young woman in MLA son name

ಎಂಎಲ್​ಎ ಮಗ ಎಂದು ನಂಬಿಸಿ ಯುವತಿ ಮರಳು ಮಾಡಿ, ಯುವತಿಯೊಂದಿಗಿನ ಖಾಸಗಿ ಕ್ಷಣಗಳ ವಿಡಿಯೋ ಪಾಲಕರ ಮೊಬೈಲ್​ಗೆ ಹಾಕಿ, ಹಣ ಕೀಳಲು ಯತ್ನಿಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಶಾಸಕರ ಪುತ್ರನ ಹೆಸರಲ್ಲಿ ಯುವತಿಗೆ ವಂಚಿಸಿದ ಖದೀಮನ ಸೆರೆ

author img

By

Published : Apr 16, 2021, 3:45 PM IST

ಕುಷ್ಟಗಿ (ಕೊಪ್ಪಳ): ಎಂಎಲ್​ಎ ಮಗ ಎಂದು ನಂಬಿಸಿ ಯುವತಿಯನ್ನು ಮರಳು ಮಾಡಿ, ಅವಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಯುವಕನನ್ನು ಬಂಧಿಸಲಾಗಿದೆ.

ಯುವತಿಯೊಂದಿಗಿನ ಖಾಸಗಿ ಕ್ಷಣಗಳ ವಿಡಿಯೋ ಪಾಲಕರ ಮೊಬೈಲ್​ಗೆ ಹಾಕಿ, ಹಣ ಕೀಳಲು ಯತ್ನಿಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಸಿಂಧನೂರು ಮೂಲದ ಯುವತಿ ತಾವರಗೇರಾ ಅಜ್ಜಿ ಮನೆಯಲ್ಲಿದ್ದಳು. ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಬಾಗೋಡಿಯ ಯುವಕನೊಂದಿಗೆ ಟಿಕ್​ಟಾಕ್ ಮೂಲಕ ಪರಿಚಯವಾಗಿದ್ದಳು. ಈತ ಶಾಸಕ ಅಭಯ ಪಾಟೀಲ ಅವರ ಮಗ, ಚಂದು ಪಾಟೀಲ್ ಎಂದು ಹೇಳಿಕೊಂಡು ಮದುವೆಯಾಗುವಂತೆ ಪೀಡಿಸಿದ್ದಾನೆ.

ಯುವಕನ ಮಾತಿಗೆ ಮರುಳಾಗಿ ಕಳೆದ ಮಾರ್ಚ್​ನಲ್ಲಿ ಗೋವಾದಲ್ಲಿ ಬೀಚ್ ಸುತ್ತಾಡಿದ್ದು, ಆಕೆಯನ್ನು ಲೈಂಗಿಕವಾಗಿ ಸಹ ಬಳಸಿಕೊಂಡಿದ್ದಾನೆ. ಈ ಎಲ್ಲವನ್ನು ಫೋಟೋ, ವಿಡಿಯೋ ಮಾಡಿಕೊಂಡಿದ್ದ ಯುವಕ, ಯುವತಿಯ ಪಾಲಕರಿಗೆ ಕಳುಹಿಸಿ 9 ಲಕ್ಷ ರೂ. ಬೇಡಿಕೆ ಇಟ್ಟಿದ್ದಾನೆ.

ಈ ಹಿನ್ನೆಲೆಯಲ್ಲಿ ಯುವತಿ ಪಾಲಕರ ತಾವರಗೇರಾ ಪೊಲೀಸ್ ಠಾಣೆಗೆ ನೀಡಿದ ದೂರಿನ‌ ಮೇರೆಗೆ ಆರೋಪಿ ಮಹ್ಮದ್ ಚಾಂದ್ ಪಾಷಾ ಅಲಿಯಾಸ್ ಚಂದು ಪಾಟೀಲ ನನ್ನು ವಶಕ್ಕೆ ತೆಗೆದುಕೊಂಡು ಕುಷ್ಟಗಿಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಕುಷ್ಟಗಿ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ತಿಳಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.