ಕುಷ್ಟಗಿ(ಕೊಪ್ಪಳ): ನಾಳೆ ನಡೆಯಲಿರುವ ಕುಷ್ಟಗಿ ತಾಲೂಕಿನ ಗುಮಗೇರಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಹಲವು ಗೊಂದಲವುಗಳು ಮೂಡಿವೆ.
ಸದರಿ ಸಮ್ಮೇಳನದ ಆಮಂತ್ರಣದ ಪತ್ರಿಕೆ ಮಾ.1ರಂದು ಬಿಡುಗಡೆಗೊಳಿಸಲಾಗಿದ್ದು, ವಾಟ್ಸಪ್ನಲ್ಲಿ ಹಂಚಿಕೆಯಾಗುತ್ತಿವೆ. ಆಮಂತ್ರಣ ಪತ್ರಿಕೆಯಲ್ಲಿ ಆಮಂತ್ರಿತರಿಗೂ ಸಹ ವ್ಯಾಟ್ಸಪ್ ಮೂಲಕ ರವಾನಿಸಲಾಗುತ್ತಿದೆ. ನಾಳೆಯೇ(ಮಾ.3) ಸಮ್ಮೇಳನವಿದ್ದು, ಬಹುತೇಕ ಅಜೀವ ಸದಸ್ಯರಿಗೆ ಆಹ್ವಾನ ಪತ್ರಿಕೆ ತಲುಪಿಸುವ ಈ ಕಸರತ್ತು ನಡೆಸಿರುವುದು ಗೊತ್ತಾಗಿದೆ. ಸಮ್ಮೇಳನ ನಡೆಸಲು ಸಾಕಷ್ಟು ಸಮಯಾವಕಾಶ ಇದ್ದಾಗ್ಯೂ ತರಾತುರಿಯಲ್ಲಿ ಕಾಟಾಚಾರದ ಸಮ್ಮೇಳನ ಕಸಾಪ ಅಜೀವ ಸದಸ್ಯರನ್ನು ಪ್ರಶ್ನಿಸುವಂತೆ ಮಾಡಿದೆ.
ದೋಟಿಹಾಳದಲ್ಲಿ ನಡೆದ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರದ ನೀಡಿಲ್ಲ. ಸಾಹಿತ್ಯ ಸಮ್ಮೇಳನಕ್ಕಾಗಿ ಸರ್ಕಾರದಿಂದ ಬಿಡುಗಡೆಯಾಗುವ 1 ಲಕ್ಷ ರೂ. ಖರ್ಚು ವೆಚ್ಚದ ಮಾಹಿತಿ ಇಲ್ಲ. ಸದರಿ ಸಮ್ಮೇಳನದಲ್ಲಿ ಬಾಳಪ್ಪ ಅರಳಿಕಟ್ಟಿ ಅವರ ಕಿರಾಣಿ ಬಾಕಿ 19 ಸಾವಿರ ರೂ. ಹಾಗೆಯೇ ಉಳಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.
ಗುಮಗೇರಾ ಸಾಹಿತ್ಯ ಸಮ್ಮೇಳನ ಲಾಂಛನದಲ್ಲಿ ದೋಟಿಹಾಳ ಅವಧೂತ ಮುನಿ ಶ್ರೀ ಶುಕಮುನಿ ತಾತ ಭಾವಚಿತ್ರ ಕಡೆಗಣಿಸಿರುವುದು, ಸಹಕಾರ ರಂಗದ ಲಚ್ಚಪ್ಪ ಲಾಳಿ ಅವರ ಹೆಸರು ದ್ವಾರ ಬಾಗಿಲಿಗೆ ಇಡದಿರುವ ಹಿನ್ನೆಲೆಯಲ್ಲಿ ಸಮ್ಮೇಳನದ ದಿನ ಕೆಲವರು ಕಪ್ಪು ಬಾವುಟ ಪ್ರದರ್ಶಿಸಲು ನಿರ್ಧರಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.