ಕುಷ್ಟಗಿ: ಲಾಕ್ಡೌನ್ ಸಡಿಲಿಕೆ ಬಳಿಕ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕುಷ್ಟಗಿ ಘಟಕ ಮೇ 4ರಿಂದ ಬಸ್ ಸೇವೆ ಆರಂಭಿಸಿದೆ. ಆದರೆ 6 ಬಸ್ಗಳ ದಿನದ ಆದಾಯ 10 ಸಾವಿರ ರೂ. ದಾಟಿಲ್ಲ.
ಕುಷ್ಟಗಿಯಿಂದ ಜಿಲ್ಲಾ ಕೇಂದ್ರಕ್ಕೆ 3 ಬಸ್, ತಾವರಗೇರಾ ಹಾಗೂ ಕೊಪ್ಪಳ ಮೂಲಕ ಗಂಗಾವತಿಗೆ 3 ಬಸ್ ಸೇವೆ ಕಲ್ಪಿಸಲಾಗಿದೆ. ಏ. 4ರಂದು 5,500 ರೂ., ಏ. 5ರಂದು 9,500 ರೂ. ಆದಾಯವಾಗಿದೆ. 25 ಪ್ರಯಾಣಿಕರು ಮಾತ್ರ ಪ್ರಯಾಣಿಸಬಹುದಾಗಿದ್ದು, ಈ ಸೇವೆ ಆರಂಭಿಸಿದ್ದರೂ ಜನ ಬಸ್ ಹತ್ತಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ 25 ಜನ ಆಗುವರೆಗೂ ಬಸ್ ಬಿಡದೇ ಇರುವುದು, ಬಸ್ಸಿನಲ್ಲಿ ಕುಳಿತು ತಾಸುಗಟ್ಟಲೆ ಕಾಯುವಂತಾಗಿದೆ.
ಈ ಕುರಿತು ಘಟಕ ವ್ಯವಸ್ಥಾಪಕ ಸಂತೋಷ ಕುಮಾರ ಪ್ರತಿಕ್ರಿಯಿಸಿ, ಈಗಾಗಲೇ ರಾಜಸ್ಥಾನಕ್ಕೆ ಒಂದು, ಮಧ್ಯಪ್ರದೇಶಕ್ಕೆ ಮೂರು ಬಸ್ಗಳನ್ನು ಕುಷ್ಟಗಿ ಕ್ವಾರಂಟೈನ್ನಲ್ಲಿದ್ದ ಉತ್ತರ ಭಾರತ ಕೂಲಿಕಾರರನ್ನು ಬಿಟ್ಟು ಬರಲು ಕಳುಹಿಸಲಾಗಿದೆ. ಪ್ರಯಾಣಿಕರ ಸಂಖ್ಯೆಯಾಧರಿಸಿ ಬಸ್ ಬಿಡಲಾಗುತ್ತಿದ್ದು, ಸಿಬ್ಬಂದಿ ಹಾಗೂ ಪ್ರಯಾಣಿಕರಿಗೆ ಥರ್ಮಾ ಸ್ಕ್ರೀನಿಂಗ್ ತಪಾಸಣೆ ಮಾಡಿ ಅವರ ಹೆಸರು, ಮೊಬೈಲ್ ವಿವರ ದಾಖಲಿಸಿಕೊಳ್ಳಲಾಗುತ್ತಿದೆ ಎಂದರು.