ETV Bharat / state

ಗಂಗಾವತಿ: ಜನವಸತಿ ಪ್ರದೇಶದ ಸನಿಹದಲ್ಲಿ ಚಿರತೆ ಪ್ರತ್ಯಕ್ಷ, ಜನರಲ್ಲಿ ಆತಂಕ - ಗಂಗಾವತಿಯ ಜನವಸತಿ ಪ್ರದೇಶದಲ್ಲಿ ಚಿರತೆ ಪತ್ತೆ

ತಾಲೂಕಿನ ಸಂಗಾಪುರ ಗ್ರಾಮದ ಸಮೀಪದ ಕಣಿವೆ ಆಂಜನೇಯ ದೇವಸ್ಥಾನದ ಬಳಿಯ ಜನವಸತಿ ಪ್ರದೇಶಕ್ಕೆ ಸನೀಹದಲ್ಲಿರುವ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ.

Leopard found
ಚಿರತೆ ಪ್ರತ್ಯಕ್ಷ
author img

By

Published : Oct 15, 2021, 7:31 PM IST

ಗಂಗಾವತಿ: ತಾಲೂಕಿನ ಸಂಗಾಪುರ ಗ್ರಾಮದ ಸಮೀಪದ ಕಣಿವೆಯ ಆಂಜನೇಯ ದೇವಸ್ಥಾನದ ಬಳಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಕೆಲಕಾಲ ಜನರಲ್ಲಿ ಆತಂಕ ಸೃಷ್ಟಿಯಾಗಿತ್ತು.

ಜನವಸತಿ ಪ್ರದೇಶದ ಸನಿಹದಲ್ಲಿ ಚಿರತೆ ಪ್ರತ್ಯಕ್ಷ

ಬೆಟ್ಟದ ಮೇಲಿನ ದೊಡ್ಡ ಕಲ್ಲೊಂದರ ಮೇಲೆ ನಿಂತು ಕುರಿಗಳ ಹಿಂಡಿನ ಮೇಲೆ ಇಣುಕು ಹಾಕಿದ ಚಿರತೆ ಕ್ಷಣಾರ್ಧದಲ್ಲಿ ಕಣ್ಮರೆಯಾಗಿದೆ. ಕೆಲ ಯುವಕರು ಬೆಟ್ಟ ಏರಿ ಚಿರತೆ ಬೆನ್ನಟ್ಟಲು ಮುಂದಾಗಿದ್ದರು. ಆದರೆ, ಯುವಕರ ಚಿರತೆ ಹುಡುಕುವ ಯತ್ನ ಕೈಗೂಡಲಿಲ್ಲ.

ಕುರಿಗಳನ್ನು ಮೇಯಿಸಲೆಂದು ಸಂಗಾಪುರದ ಮಹಿಳೆಯೊಬ್ಬರು ಬೆಟ್ಟಕ್ಕೆ ತೆರಳಿದ್ದರು. ಈ ವೇಳೆ, ಚಿರತೆ ಕಂಡು ಅರಚುತ್ತಾ ಕೆಳಕ್ಕೆ ಓಡಿ ಬಂದಿದ್ದರು. ಮಹಿಳೆಯ ಅರಚಾಟ ಕೇಳಿದ ಗಂಗಾವತಿ - ಆನೆಗೊಂದಿ ಮಾರ್ಗದ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು, ತಕ್ಷಣ ಆಕೆಯನ್ನು ಸಮಾಧಾನ ಪಡಿಸಿದ್ದರು.

ಚಿರತೆಯ ವಿಚಾರ ಕೇಳುತ್ತಿದ್ದಂತೆಯೇ ಅಧಿಕ ಸಂಖ್ಯೆಯಲ್ಲಿ ವಾಹನ ಸವಾರರು ಜಮಾವಣೆಗೊಂಡಿದ್ದರು. ಇದರಿಂದ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.

ಇದನ್ನೂ ಓದಿ: C‌‌ovid-19 : ರಾಜ್ಯದಲ್ಲಿಂದು 470 ಮಂದಿಗೆ ಸೋಂಕು, 9 ಮಂದಿ ಸಾವು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.