ಗಂಗಾವತಿ (ಕೊಪ್ಪಳ): ನಗರದ ಆನೆಗೊಂದಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಉದ್ಯೋಗ ಮೇಳಕ್ಕೆ ಪ್ರಚಾರದ ಕೊರತೆಯಿಂದ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಕ್ಷೀಣಿಸಿತ್ತು.
ಉದ್ಯೋಗ ಮೇಳದಲ್ಲಿ ರಾಜ್ಯದ ನಾನಾ ಜಿಲ್ಲೆಯ 25ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಂಡಿದ್ದವು. ಆದರೆ, ಉದ್ಯೋಗ ಮೇಳದ ಬಗ್ಗೆ ಸರಿಯಾದ ಪ್ರಚಾರ ಕೈಗೊಳ್ಳದ್ದರ ಹಿನ್ನೆಲೆ, ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಕ್ಷೀಣಿಸಿತ್ತು. ಈ ವೇಳೆ ತರಾತುರಿಯಲ್ಲಿ ಹಾಗೂ ಕಾಟಾಚಾರಕ್ಕೆ ಎಂಬಂತೆ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದರು.
ಓದಿ: 'ಮಹಾ' ನಾಯಕರು ಪ್ರಬುದ್ಧರಾಗಬೇಕು : ಉದ್ಧವ್ ಠಾಕ್ರೆಗೆ ಸುರೇಶ್ ಕುಮಾರ್ ತಿರುಗೇಟು
ಮೇಳದಲ್ಲಿ ಆಯೋಜಕರು ಮತ್ತು ನಾನಾ ಕಂಪನಿಗಳ ಪ್ರತಿನಿಧಿಗಳ ಸಂಖ್ಯೆ ಹೆಚ್ಚಾಗಿತ್ತು. ಅಲ್ಲದೇ ನಗರದಿಂದ 3 ಕಿಮೀ ಅಂತರದಲ್ಲಿರುವ ಕಾಲೇಜಿನಲ್ಲಿ ಮೇಳ ಆಯೋಜಿಸಿದ್ದರಿಂದ ಸೂಕ್ತ ಸಂಚಾರದ ವ್ಯವಸ್ಥೆ ಇಲ್ಲದೇ ಉದ್ಯೋಗಕಾಂಕ್ಷಿಗಳು ನಿಗದಿತ ಸ್ಥಳಕ್ಕೆ ತೆರಳಲು ಪರದಾಡಿದರು.