ಕುಷ್ಟಗಿ (ಕೊಪ್ಪಳ): ಹಿಂಗಾರು ಹಂಗಾಮಿನ ಕಡಲೆ ಬೆಳೆಗೆ ಹಸಿರು ಕೀಟದ ಬಾಧೆ ಆರಂಭವಾಗಿದೆ. ಇದರ ನಿಯಂತ್ರಣಕ್ಕಾಗಿ ಪ್ರಫೀನೋಫಾಸ್ ಕೀಟನಾಶಕ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಾಗದೇ ಇರುವುರಿಂದ ರೈತರ ಚಿಂತೆಗೀಡಾಗಿದ್ದಾರೆ.
ಬಿತ್ತನೆಯಾದ 20ರಿಂದ 25 ದಿನದ ಕಡಲೆ ಬೆಳೆಗೆ ಎಲೆ ತಿನ್ನುವ ಹಸಿರು ಕೀಟ ಬಾಧೆ ಕಂಡು ಬಂದಿದೆ. ತಕ್ಷಣವೇ ನಿಯಂತ್ರಿಸಲು ಪ್ರಫೀನೋಫಾಸ್ ಕೀಟನಾಶಕ ಸಿಂಪಡಿಸಬೇಕಿದೆ. ರೈತ ಸಂಪರ್ಕ ಕೇಂದ್ರದಲ್ಲಿ ಕಡಿಮೆ ಬೆಲೆಗೆ ಲಭ್ಯವಿದ್ದು, ಆದರೆ ಒಮ್ಮೆಲೆ ಬೇಡಿಕೆ ಹೆಚ್ಚಾದ ಕಾರಣ ಕ್ರಿಮಿನಾಶಕದ ಕೊರತೆ ಎದುರಾಗಿದೆ.
ಹೀಗಾಗಿ ರೈತರು ರೈತ ಸಂಪರ್ಕ ಕೇಂದ್ರದಲ್ಲಿ ಪ್ರಫೀನೋಫಾಸ್ಗೆ ಕಾಯದೇ ದುಬಾರಿ ಬೆಲೆಗೆ ಖರೀದಿಸಿ ಕಡಲೆ ಬೆಳೆ ರಕ್ಷಣೆಗೆ ಮುಂದಾಗಿದ್ದಾರೆ. ಪ್ರಫೀನೋಫಾಸ್ ರೈತ ಸಂಪರ್ಕ ಕೇಂದ್ರದಲ್ಲಿ ಪ್ರತಿ ಲೀಟರ್ಗೆ 440 ರೂ. ಇದ್ದರೆ, ಖಾಸಗಿಯಾಗಿ 550 ರೂಪಾಯಿಗೆ ಲಭ್ಯವಾಗುತ್ತಿದೆ. ಕೂಡಲೇ ಪ್ರಫಿನೋಫಾಸ್ ಕೀಟನಾಶಕವನ್ನು ಬೇಡಿಕೆಗೆ ಅನುಗುಣವಾಗಿ ದಾಸ್ತಾನು ಮಾಡಿಕೊಳ್ಳಬೇಕೆಂದು ರೈತರ ಆಗ್ರಹವಾಗಿದೆ.