ಕುಷ್ಟಗಿ(ಕೊಪ್ಪಳ): ಅಕ್ರಮವಾಗಿ ಗಂಗಾವತಿಯಿಂದ ಕುಷ್ಟಗಿ ಮೂಲಕ ಗುಜರಾತ್ಗೆ ಸಾಗಿಸುತ್ತಿದ್ದ 340 ಕ್ವಿಂಟಲ್ ಅನ್ನಭಾಗ್ಯ ಅಕ್ಕಿಯನ್ನು ಹೆದ್ದಾರಿ ವಣಗೇರಾ ಟೋಲ್ ಪ್ಲಾಜಾ ಬಳಿ ಕುಷ್ಟಗಿ ಆಹಾರ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಗಂಗಾವತಿಯ ಅಭಿಜಿತ್ ಟ್ರೇಡರ್ಸ್ ನಿಂದ ಗುಜರಾತ್ ಜಟಿಲಪುರ ವಿನಲ್ ರೈಸ್ ಮಿಲ್ಗೆ RJ-GA-118 ಲಾರಿಯಲ್ಲಿ 50 ಕೆ.ಜಿ 680 ಚೀಲಗಳಲ್ಲಿ 340 ಕ್ವಿಂಟಲ್ ಅಕ್ಕಿಯನ್ನು ಸಾಗಿಸಲಾಗುತ್ತಿತ್ತು. ಪ್ರತಿ ಕ್ವಿಂಟಲ್ಗೆ 2,383 ರೂ ನಂತೆ 8,10,220 ರೂ.ಎಂದು ಅಂದಾಜಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಆಹಾರ ನಿರೀಕ್ಷಕ ನಿತಿನ್ ಅಗ್ನಿ ಅವರು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ರಾಜಸ್ಥಾನ ಮೂಲದ ಲಾರಿ ಚಾಲಕ ಮದನ್ ಲಾಲ್ ಬ್ರಿಜ್ ಲಾಲ್ ಹಾಗೂ ಗಂಗಾವತಿ ಅಭಿಜಿತ್ ಟ್ರೇಡರ್ಸ್ ವಿರುದ್ಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.