ಗಂಗಾವತಿ (ಕೊಪ್ಪಳ): ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ತಾಲೂಕಿನ ವಿದ್ಯಾನಿಕೇತ ಕಾಲೇಜು ಶೇ. 96.2ರಷ್ಟು ಫಲಿತಾಂಶ ಪಡೆಯುವ ಮೂಲಕ ಕೊಪ್ಪಳ ಜಿಲ್ಲೆಯಲ್ಲಿ ಅಗ್ರಸ್ಥಾನಕ್ಕೇರಿದೆ. ಜಿಲ್ಲೆಗೆ ಈ ಬಾರಿ ಶೇ.60.09 ರಿಸಲ್ಟ್ ಬಂದಿದೆ.
ಕಾಲೇಜಿನಿಂದ ಪರೀಕ್ಷೆಗೆ ಹಾಜರಾದ 552 ವಿದ್ಯಾರ್ಥಿಗಳ ಪೈಕಿ 531 ಮಕ್ಕಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ 208 ವಿದ್ಯಾರ್ಥಿಗಳು ಉನ್ನತ ಶ್ರೇಣಿ (ಡಿಸ್ಟಿಂಕ್ಷನ್), 309 ಮಕ್ಕಳು ಪ್ರಥಮ ದರ್ಜೆ ಹಾಗೂ 14 ಮಕ್ಕಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಈ ಪೈಕಿ 592 ಅಂಕ ಪಡೆದ ಅಲ್ಲಮಪ್ರಭು ರಾಜ್ಯಕ್ಕೆ 5ನೇ ಟಾಪರ್ ಹಾಗೂ ಕಲ್ಯಾಣ ಕರ್ನಾಟಕ ಮತ್ತು ಕೊಪ್ಪಳ ಜಿಲ್ಲೆಯ ಮೊದಲ ಟಾಪರ್ ಆಗಿದ್ದಾರೆ. ರಾಜೇಶ್ವರ, ವೆಂಕಟೇಶ ಕ್ರಮವಾಗಿ ತಲಾ 581 ಅಂಕದೊಂದಿಗೆ ಎರಡನೇ ಸ್ಥಾನ ಹಾಗೂ ಕೆ.ಎಂ. ಮಯೂರಿ ಎಂಬ ವಿದ್ಯಾರ್ಥಿನಿ 580 ಅಂಕದೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.