ETV Bharat / state

ಕೊಪ್ಪಳ: ಸಾಕುಪ್ರಾಣಿಗಳಿಗೂ ಕೊರೊನಾ ಸೋಂಕು ಹರಡುವ ಭೀತಿ! - corona for pets

ಮನುಷ್ಯರಿಂದ ಕೊರೊನಾ ಸೋಂಕು ಸಾಕುಪ್ರಾಣಿಗಳಿಗೂ ಹರಡುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದಕ್ಕೆ ಸಾಕ್ಷಿ ಎಂಬಂತೆ ಕೆಲವೆಡೆ ಪ್ರಾಣಿಗಳಿಗೆ ಸೋಂಕು ದೃಢಪಟ್ಟಿದೆ. ಹೀಗಾಗಿ ಅಲ್ಲಲ್ಲಿ ಸಾಕುಪ್ರಾಣಿಗಳನ್ನು ತ್ಯಜಿಸುವ ಮನಸ್ಥಿತಿಗೆ ಜನರು ಬರುತ್ತಿದ್ದಾರೆ. ಆದ್ರೆ ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ ಹಾಗಿಲ್ಲ. ಸೋಂಕು ಭೀತಿಯ ನಡುವೆಯೂ ತಮ್ಮ ಸಾಕು ಪ್ರಾಣಿಗಳನ್ನು ಮೊದಲಿನಂತೆಯೇ‌ ಮನೆಯಲ್ಲಿ ಸಾಕಿ ಸಲಹುತ್ತಿದ್ದಾರೆ.

koppala people taking care of their  pets in this covid condition
ಸಾಕು ಪ್ರಾಣಿಗಳಿಗೂ ಸೋಂಕು ಹರಡುವ ಭೀತಿ
author img

By

Published : May 28, 2021, 9:15 AM IST

ಕೊಪ್ಪಳ: ಕೋವಿಡ್​ ಎರಡನೇ ಅಲೆ ಜಿಲ್ಲೆಯಲ್ಲಿಯೂ ವ್ಯಾಪಕವಾಗಿ ಹರಡುತ್ತಿದ್ದು, ಜನರನ್ನು ತೀವ್ರ ಭೀತಿಗೊಳಗಾಗಿಸಿದೆ. ಮನುಷ್ಯ ಮನುಷ್ಯರನ್ನು ಅನುಮಾನದಿಂದ ನೋಡುವ ಪರಿಸ್ಥಿತಿ ಇದ್ದು, ಒಬ್ಬರು ಇನ್ನೊಬ್ಬರ ಹತ್ತಿರ ಸುಳಿಯುತ್ತಿಲ್ಲ. ಅಷ್ಟೇ ಯಾಕೆ ಸಾಕುಪ್ರಾಣಿಗಳನ್ನು ಸಹ ಅನುಮಾನದಿಂದ ನೋಡುವಂತಾಗಿದೆ. ಕೊರೊನಾ ಭೀತಿ ಹಿನ್ನೆಲೆ ಸಾಕು ಪ್ರಾಣಿಗಳನ್ನು ತ್ಯಜಿಸುವ ಮನೋಭಾವ ಅಲ್ಲಲ್ಲಿ ಕಂಡು ಬರುತ್ತಿದೆ.

ಮನುಷ್ಯ ಸಂಘ ಜೀವಿ. ಮನುಷ್ಯ ಹಾಗೂ ಸಾಕುಪ್ರಾಣಿಗಳ ನಡುವೆ ಅವಿನಾಭಾವ ಸಂಬಂಧವಿರುತ್ತದೆ. ಸಾಮಾನ್ಯವಾಗಿ ಹೆಚ್ಚಿನವರು ಮನೆಯಲ್ಲಿ ನಾಯಿ, ಬೆಕ್ಕುಗಳನ್ನು ಸಾಕಿಕೊಂಡಿರುತ್ತಾರೆ. ಈಗ ಕೊರೊನಾ ಸೋಂಕಿನ ಎರಡನೇ ಅಲೆಯಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಸೋಂಕು ಮನುಷ್ಯರಿಂದ ಸಾಕು ಪ್ರಾಣಿಗಳಿಗೂ ಹರಡುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದಕ್ಕೆ ಸಾಕ್ಷಿ ಎಂಬಂತೆ ಕೆಲವೆಡೆ ಪ್ರಾಣಿಗಳಿಗೆ ಸೋಂಕು ದೃಢಪಟ್ಟಿದೆ. ಹೀಗಾಗಿ ಸಾಕುಪ್ರಾಣಿಗಳನ್ನು ತ್ಯಜಿಸುವ ಮನಸ್ಥಿತಿಗೆ ಬರುತ್ತಿರುವ ಸನ್ನಿವೇಶಗಳು ಅಲ್ಲಲ್ಲಿ ಸೃಷ್ಟಿಯಾಗುತ್ತಿವೆ ಎನ್ನಲಾಗುತ್ತಿದೆ.

ಸಾಕುಪ್ರಾಣಿಗಳಿಗೂ ಸೋಂಕು ಹರಡುವ ಭೀತಿ

ಆದರೆ ಕೊಪ್ಪಳ ಜಿಲ್ಲೆಯಲ್ಲಿ ಸದ್ಯಕ್ಕೆ ಅಂತಹ ಸನ್ನಿವೇಶವಿಲ್ಲ. ಗ್ರಾಮೀಣ ಭಾಗಗಳಲ್ಲಿನ ಮನೆಗಳಲ್ಲಿ ಸಾಮಾನ್ಯವಾಗಿ ಬೆಕ್ಕುಗಳನ್ನು ಸಾಕುತ್ತಾರೆ. ಇನ್ನು ನಾಯಿಗಳನ್ನು ಕೆಲವರು ಹೊಲದಲ್ಲಿ ಸಾಕಿಕೊಂಡಿದ್ದಾರೆ. ನಗರ ಪ್ರದೇಶಗಳಲ್ಲಿ ಬೇರೆ ಬೇರೆ ತಳಿಯ ನಾಯಿಗಳು ಶ್ರೀಮಂತರು ಹಾಗೂ ನಾಯಿ ಸಾಕುವ ಹವ್ಯಾಸವುಳ್ಳವರ ಮನೆಯಲ್ಲಿ ಕಂಡು ಬರುತ್ತವೆ. ಕೊರೊನಾದಂತಹ ಈ ಸಂದರ್ಭದಲ್ಲಿ ಮನುಷ್ಯರಿಂದ‌ ಪ್ರಾಣಿಗಳಿಗೆ ಸೋಂಕು ಹರಡಬಹುದು ಎಂಬ ಭೀತಿಯಿಂದ ಜಿಲ್ಲೆಯಲ್ಲಿ ಸಾಕುಪ್ರಾಣಿಗಳನ್ನು ಅವುಗಳ ಮಾಲೀಕರು ತ್ಯಜಿಸಿರುವ ಪ್ರಕರಣಗಳ ಉದಾಹರಣೆ ಇಲ್ಲ ಎನ್ನುತ್ತಾರೆ ಸ್ಥಳೀಯರು.

ಸೋಂಕು ಭೀತಿಯ ನಡುವೆಯೂ ತಮ್ಮ ಸಾಕುಪ್ರಾಣಿಗಳನ್ನು ಮೊದಲಿನಂತೆಯೇ‌ ಮನೆಯಲ್ಲಿ ಸಾಕಿ ಸಲಹುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯರಾದ ಮೌಲಾಹುಸೇನ್ ಬುಲ್ಡಿಯಾರ. ಮನುಷ್ಯರಿಂದ ಪ್ರಾಣಿಗಳಿಗೆ ಹರಡುವ ರೋಗಗಳು ಇವೆ. ಆದರೆ ಕೊರೊನಾ ಸೋಂಕು ಮನುಷ್ಯರಿಂದ ಪ್ರಾಣಿಗಳಿಗೆ ತಗುಲಿರುವ ಬಗ್ಗೆ ವೈಜ್ಞಾನಿಕ ವರದಿ ಇಲ್ಲ. ಕೊರೊನಾ ಸೋಂಕಿನ ಭೀತಿಯಿಂದ ಜನರು ಸಾಕು ಪ್ರಾಣಿಗಳನ್ನು ತ್ಯಜಿಸಿರುವ ಉದಾಹರಣೆ ನಮ್ಮ ಜಿಲ್ಲೆಯಲ್ಲಿ ಇಲ್ಲ ಎನ್ನುತ್ತಾರೆ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ನಾಗರಾಜ.

ಇದನ್ನೂ ಓದಿ: ಬೆಂಗಳೂರಿನಲ್ಲಿ 'ನಿರ್ಭಯಾ' ರೀತಿ ಅಮಾನವೀಯ ಲೈಂಗಿಕ ದೌರ್ಜನ್ಯ ಕೇಸ್‌: ಪರಾರಿಗೆ ಯತ್ನಿಸಿದ ಆರೋಪಿಗಳಿಗೆ ಗುಂಡು

ಸೋಂಕಿನ ಭೀತಿಯಿಂದ ಜನರು ಸಾಕುಪ್ರಾಣಿಗಳನ್ನು ತ್ಯಜಿಸುವ ಬದಲು, ಮಾನವ ಹಾಗೂ ಪ್ರಾಣಿಗಳ ಆರೋಗ್ಯದ ಹಿತದೃಷ್ಟಿಯಿಂದ ಸೋಂಕು ನಿಯಂತ್ರಣಕ್ಕೆ ಜನರು ಮುಂದಾಗಬೇಕಿದೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕೊರೊನಾವನ್ನು ಸಂಪೂರ್ಣ ನಿಯಂತ್ರಿಸಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.