ETV Bharat / state

ಜನಜಾಗೃತಿಯೇ ಗವಿಸಿದ್ದೇಶ್ವರ ಜಾತ್ರೆಯ ಉದ್ದೇಶ: ಇಂದು ಮಹಾರಥೋತ್ಸವಕ್ಕೆ ಸದ್ಗುರು ಚಾಲನೆ - ಈಟಿವಿ ಭಾರತ ಕನ್ನಡ

ಕೊಪ್ಪಳದ ಗವಿಸಿದ್ದೇಶ್ವರರ ಜಾತ್ರೆಯಲ್ಲಿ ಜನಜಾಗೃತಿಯೇ ಮೂಲ ಉದ್ದೇಶವಾಗಿದೆ. ಈ ಸಲ ಅಂಗಾಂಗ ದಾನದ ಕುರಿತಾಗಿ ಜಾಗೃತಿ ಮೂಡಿಸಲಾಗುತ್ತದೆ.

Gavisiddeshwara Matha
ಶ್ರೀ ಸದ್ಗುರು
author img

By

Published : Jan 8, 2023, 7:19 AM IST

Updated : Jan 8, 2023, 7:51 AM IST

ಕೊಪ್ಪಳದ ಗವಿಸಿದ್ದೇಶ್ವರರ ಜಾತ್ರೆಗೆ ಸಿದ್ಧತೆ

ಕೊಪ್ಪಳ: ವರ್ಷಾವಧಿ ಜಾತ್ರೆಗಾಗಿ ಊರವರೆಲ್ಲಾ ಕಾಯುವುದುಂಟು. ಅಂದು ದೇವಸ್ಥಾನಗಳಲ್ಲಿ ದೇವರಿಗೆ ವಿಶೇಷ ಪೂಜೆಗಳು ನೆರವೇರುತ್ತವೆ. ಜನರು ಒಟ್ಟಾಗಿ ಸೇರುವ ಹಬ್ಬವದು. ಆದರೆ ಇಲ್ಲೊಂದೆಡೆ ನಡೆಯುವ ಜಾತ್ರೆ ವಿಶೇಷ. ಸಾಮಾಜಿಕ ಕಳಕಳಿಯೇ ಈ ಜಾತ್ರೆಯ ಮೂಲ ಉದ್ದೇಶವಾಗಿದೆ.

ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಸಾಮಾಜಿಕ ಜಾಗೃತಿ, ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಇಂದು ಗವಿಸಿದ್ದೇಶ್ವರ ಮಹಾರಥೋತ್ಸವ ನಡೆಯಲಿದ್ದು, ರಥ ಎಳೆಯಲು ಜನರು ಕಾತುರರಾಗಿದ್ದಾರೆ. ಸಂಜೆ 5 ಗಂಟೆಗೆ ಜರುಗುವ ಮಹಾರಥೋತ್ಸವಕ್ಕೆ ಈಶ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್‌ ಅವರು ಚಾಲನೆ ನೀಡಲಿದ್ದಾರೆ.

ಜಾಗೃತಿ ಜಾಥಾ: ಗವಿಮಠ ಜಾತ್ರೆಗೆಂದು ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಕಳೆದ ಹಲವು ವರ್ಷಗಳಿಂದ ವಿವಿಧ ಜಾಗೃತಿ ಜಾಥಾಗಳನ್ನು ಮಾಡುತ್ತಿದೆ. ಜಲದೀಕ್ಷೆ, ಬಾಲ್ಯ ವಿವಾಹ, ಲಕ್ಷ ವೃಕ್ಷ ಸೇರಿದಂತೆ ಪ್ರತಿ ವರ್ಷ ಒಂದೊಂದು ವಿಷಯ ಆಯ್ದುಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗುತ್ತಿದೆ. ಈ ಬಾರಿ ಅಂಗಾಗ ದಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ: ತುಂಗೆಯ ಮಡಿಲಲ್ಲಿ ಅದ್ಧೂರಿಯಾಗಿ ನಡೆದ ಕೋಟೆ ಶ್ರೀ ಸೀತಾರಾಮ ತೆಪ್ಪೋತ್ಸವ

ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಲಿರುವ ಮಹಾದಾಸೋಹಕ್ಕಾಗಿ ಜಿಲ್ಲೆ ಸೇರಿದಂತೆ ಸುತ್ತಮುತ್ತಲ ಗ್ರಾಮದಿಂದ ಭಕ್ತರು ಸ್ವಯಂಪ್ರೇರಿತರಾಗಿ ರೊಟ್ಟಿಗಳನ್ನು ತಯಾರಿಸಿ ತಂದಿದ್ದು, ರೋಟಿಗಳ ಸಂಖ್ಯೆ ಇಪ್ಪತ್ತು ಲಕ್ಷ ದಾಟಿದೆ. ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಗೆಳೆಯರ ಬಳಗವು 265 ರಿಂದ 278 ಕ್ವಿಂಟಲ್​ ಸಿಹಿ ಮಾದಲಿ ಅರ್ಪಿಸಿದ್ದಾರೆ. ಸಿಂದನೂರಿನ ಭಕ್ತರು 6 ಲಕ್ಷ ಶೇಂಗಾ ಹೋಳಿಗೆ ತಯಾರಿಸಿ ತಂದು ಸಮರ್ಪಿಸಿದ್ದಾರೆ. ಕೊಪ್ಪಳದ ಗೆಳೆಯರ ಬಳಗವು 10 ಲಕ್ಷಕ್ಕೂ ಹೆಚ್ಚು ಮಿರ್ಚಿ ತಯಾರಿಸಲು ಯೋಜನೆ ರೂಪಿಸಿಕೊಂಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಕೋವಿಡ್​ ಕಾರಣದಿಂದಾಗಿ ಕಮರಿದ್ದ ಜಾತ್ರೆಗೆ ಈ ವರ್ಷ ಕಳೆ ಬಂದಿದೆ. ಅತಿ ಹೆಚ್ಚು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ.

ದಕ್ಷಿಣ ಭಾರತದ 'ಮಹಾ ಕುಂಭಮೇಳ' ಎಂದು ಪ್ರಸಿದ್ದಿ ಪಡೆದಿರುವ ಕೊಪ್ಪಳದ ಗವಿಮಠ ಜಾತ್ರೆಯ ಹಿನ್ನೆಲೆಯಲ್ಲಿ ಜನವರಿ 6ರಂದು ಮುಂಜಾವು ಮಠದ ಆವರಣದ ಕೆರೆಯಲ್ಲಿ ತೆಪ್ಪೋತ್ಸವ ನಡೆದಿದೆ. ಉತ್ಸವ ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಆ ದಿನವೇ ಮೊದಲ ಬಾರಿಗೆ ಗಂಗಾರತಿಯೂ ಜರುಗಿತ್ತು.

ಇದನ್ನೂ ಓದಿ: ಮಂಡ್ಯ ಮಹಾ ಕುಂಭಮೇಳ: ಮಹದೇಶ್ವರನ ಬೆಟ್ಟದಿಂದ ಜ್ಯೋತಿ ಯಾತ್ರೆ ಆರಂಭ

Last Updated : Jan 8, 2023, 7:51 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.