ETV Bharat / state

ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ಸಂಘರ್ಷವಲ್ಲ: ಚೈತ್ರಾ ಕುಂದಾಪುರ - ಮಳಲಿ ಮಸೀದಿ ವಿವಾದ

ರಾಜ್ಯದಲ್ಲಿ ಹಿಂದು ಮತ್ತು ಮುಸಲ್ಮಾನರ ಮಧ್ಯೆ ನಡೆಯುತ್ತಿರುವುದು ಧರ್ಮ ಸಂಘರ್ಷವಲ್ಲ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಅಷ್ಟೆ ಎಂದು ಹಿಂದೂಪರ ಸಂಘಟನೆಗಳ ಕಾರ್ಯಕರ್ತೆ ಚೈತ್ರಾ ಕುಂದಾಪುರ ಹೇಳಿದರು.

Religion is not an ongoing conflict in the state Chaithra Kundapura
ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ಸಂಘರ್ಷವಲ್ಲ: ಚೈತ್ರಾ ಕುಂದಾಪುರ
author img

By

Published : May 25, 2022, 8:30 PM IST

ಗಂಗಾವತಿ: ರಾಜ್ಯದಲ್ಲಿ ಹಿಂದು ಮತ್ತು ಮುಸಲ್ಮಾನರ ಮಧ್ಯೆ ನಡೆಯುತ್ತಿರುವುದು ಧರ್ಮ ಸಂಘರ್ಷವಲ್ಲ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಅಷ್ಟೆ. ರಾಜ್ಯದಲ್ಲಿ ನಡೆಯುತ್ತಿರುವುದು ಧರ್ಮ ಸಂಘರ್ಷ ಅಂತಾ ನನಗ ಅನಿಸಲ್ಲ. ಕಾಂಗ್ರೆಸ್ ಮತ್ತು ಮತಾಂಧ ನಾಯಕರು ಅದಕ್ಕೆ ಧರ್ಮ ಸಂಘರ್ಷ ಎಂದು ಬಣ್ಣ ಕಟ್ಟಿ ಹಿಂದುಗಳ ಮೇಲೆ ಗೂಬೆ ಕೂರಿಸುವ ಯತ್ನ ನಡೆಸುತ್ತಿದ್ದಾರೆ ಎಂದು ಹಿಂದುಪರ ಸಂಘಟನೆಗಳ ಕಾರ್ಯಕರ್ತೆ ಚೈತ್ರಾ ಕುಂದಾಪುರ ಹೇಳಿದರು.

ಈ ಬಗ್ಗೆ ನಗರದಲ್ಲಿ ಮಾತನಾಡಿದ ಅವರು, ಮಸೀದಿಗಳಲ್ಲಿ ದೇವಸ್ಥಾನಗಳು ಪತ್ತೆಯಾಗಿರೋದು ಹೊಸತಲ್ಲ. ಮೊಗಲರು ಅಳ್ವಿಕೆ ಮಾಡಿದಾಗ ದೇವಸ್ಥಾನ ಕೆಡವಿ ಮಸೀದಿ ಕಟ್ಟಿರೋದು ನಾವು ಇತಿಹಾಸದಲ್ಲಿ ಓದಿದ್ದೇವೆ. ಇದು ಯಾವೂದೂ ಕಟ್ಟು ಕಥೆ ಅಲ್ಲ. ಸತ್ಯ ಘಟನೆಗಳು. ಕಾಲಕ್ರಮೇಣ ಹೊರ ಬರುತ್ತವೆ ಅಷ್ಟೆ. ಮಳಲಿ ಭಾಗದಲ್ಲಿ ಮಾತ್ರ ಅಲ್ಲ, ದೇಶದ ಯಾವುದೇ ಭಾಗದಲ್ಲಿನ ಮಸೀದಿ ತೆರವು ಮಾಡಿದರೆ ಅಲ್ಲಿ ದೇವಸ್ಥಾನ ಕಾಣಸಿಗುತ್ತೆ. ದೈವಿ ಸಂಕಲ್ಪ ಜಾಗೃತಿಯಾದಾಗ ಇಂತಹ ಹೊಸ ವಿಚಾರಗಳು ಬೆಳಕಿಗೆ ಬರತ್ತೆ ಎಂದು ಹೇಳಿದರು.

ಮುಸಲ್ಮಾನರು ಸೌಹಾರ್ದಯುತವಾಗಿ ಮಳಲಿಯ ದೇವಾಲಯವನ್ನು ಹಿಂದುಗಳಿಗೆ ಮರಳಿ ಬಿಟ್ಟುಕೊಡಬೇಕು: ಈ ಹಿಂದೆಯೇ ಇದು ದೇವಸ್ಥಾನ ಅಂತಾ ಗೊತ್ತಿತ್ತು. ಇದೀಗ ಅಧಿಕೃತವಾಗಿ ಶಾಸ್ತ್ರೋಕ್ತವಾಗಿ ಇದನ್ನ ಪಂಡಿತರು ಸ್ಪಷ್ಟಪಡಿಸಿದ್ದಾರೆ. ಆ ಮಸೀದಿ ಜಾಗದಲ್ಲಿ ವೀರಶೈವ ಲಿಂಗಾಯತ ಮಠ ಇತ್ತು ಎಂಬುದು ನನ್ನ ಗಮನಕ್ಕೆ ಈ ಹಿಂದೆಯೇ ಬಂದಿತ್ತು.

ಆದರೆ ಸೂಕ್ತ ಪುರಾವೆಗಳಿಲ್ಲದ್ದರಿಂದ ಹೋರಾಟಕ್ಕ ಅಣಿಯಾಗಿರಲಿಲ್ಲ. ಮುಸ್ಲಿಂ ಮುಖಂಡರು ಮಳಲಿ ಮಸೀದಿಯನ್ನು ಸೌಹಾರ್ದಯುತವಾಗಿ ಹಿಂದುಗಳಿಗೆ ದೇವಾಲಯದ ರೂಪದಲ್ಲಿ ಒಪ್ಪಿಸಬೇಕು. ಈ ಮೂಲಕ ಸೌಹಾರ್ದತೆ ತೋರಿ ಇಡೀ ದೇಶಕ್ಕೆ ನಮ್ಮ ಮುಸಲ್ಮಾನರು ಮಾದರಿಯಾಗಬೇಕು ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.

ಇದನ್ನೂ ಓದಿ: ಮಳಲಿ ಮಸೀದಿ ವಿವಾದ: ಹೆಚ್​ಡಿಕೆ ಜವಾಬ್ದಾರಿ ಯುತವಾಗಿ ನಡೆದುಕೊಳ್ಳಲಿ - ಶಾಸಕ ಭರತ್ ಶೆಟ್ಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.