ETV Bharat / state

ದುಡ್ಡು ಕದ್ದ ಆರೋಪ... ಬಾಲಕಿಯನ್ನು ಥಳಿಸಿ, ಕಟ್ಟಿಹಾಕಿದ ಅಂಗಡಿ ಮಾಲೀಕ - ಥಳಿತ

ಅಂಗಡಿಯಲ್ಲಿ ಬಾಲಕಿ 50 ರೂಪಾಯಿ ಕದ್ದಿದ್ದಾಳೆ ಎಂದು ಆರೋಪಿಸಿ 5 ವರ್ಷದ ಬಾಲಕಿಯನ್ನು ಅಂಗಡಿ ಮಾಲೀಕನೋರ್ವ ಥಳಿಸಿರುವ ಘಟನೆ ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿ ನಡೆದಿದೆ.

ಮಾಲೀಕ
author img

By

Published : Mar 20, 2019, 8:13 PM IST

ಕೊಪ್ಪಳ: ಅಂಗಡಿ ಮಾಲೀಕನೋರ್ವ ಐದು ವರ್ಷದ ಬಾಲಕಿಯನ್ನು ದುಡ್ಡು ಕದ್ದಿದ್ದಾಳೆ ಎಂದು ಆರೋಪಿಸಿ ಆಕೆಯನ್ನು ಕಟ್ಟಿಹಾಕಿ ಥಳಿಸಿರುವ ಘಟನೆ ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿ ನಡೆದಿದೆ.

ಯಲಬುರ್ಗಾದ ಪ್ರಶಾಂತ್​ ನಗರದಲ್ಲಿ ಈ ಪ್ರಕರಣ ನಡೆದಿದೆ. ಮೋದಿನ್ ಸಾಬ್ ಎಂಬಾತನ ವಿರುದ್ಧ ಈ ಆರೋಪ ಕೇಳಿಬಂದಿದೆ. ಅಂಗಡಿಯಲ್ಲಿ ಬಾಲಕಿ 50 ರೂಪಾಯಿ ಕದ್ದಿದ್ದಾಳೆ ಎಂದು ಆರೋಪಿಸಿ ಬಾಲಕಿಯನ್ನು ಅಂಗಡಿ ಮಾಲೀಕ ಮೋದಿನ್​ ಸಾಬ್ ಕಟ್ಟಿಹಾಕಿ ಥಳಿಸಿದ್ದಾನೆ.

ಅಲ್ಲದೆ ನೆತ್ತಿ ಸುಡುವ ಬಿಸಿಲಿನಲ್ಲಿ ಸುಮಾರು 2 ಗಂಟೆಗೂ ಅಧಿಕ ಕಾಲ ಬಾಲಕಿಯನ್ನು ಕಟ್ಟಿಹಾಕಿ ಅಮಾನವೀಯತೆ ಮೆರೆದಿದ್ದಾನೆ. ಸ್ಥಳೀಯರು ಮಾಹಿತಿ ನೀಡಿದ ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಮೋದಿನ್​ವಿಚಾರಣೆನಡೆಸಿದ್ದಾರೆ.

Intro:Body:

1 KN_KPL_02c_200319_Amaanaveeyate_Photo_7202284.jpg  

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.