ETV Bharat / state

ಕೊಪ್ಪಳ ನಗರ ಸಭೆ ಚುನಾವಣೆ : ಕಾಂಗ್ರೆಸ್ ತೆಕ್ಕೆಗೆ ಅಧ್ಯಕ್ಷ, ಜೆಡಿಎಸ್ ತೆಕ್ಕೆಗೆ ಉಪಾಧ್ಯಕ್ಷ ಸ್ಥಾನ - Koppala corporation election JDS candidate selected as vice president

ಕೊಪ್ಪಳ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ, ಕೊಪ್ಪಳ ನಗರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್‌ ಪಕ್ಷದ ಶಿವಗಂಗಮ್ಮ ಭೂಮಕ್ಕನವರ್, ಉಪಾಧ್ಯಕ್ಷರಾಗಿ ಜೆಡಿಎಸ್ ನ ಆಯಿಷಾ ರುಬಿನಾ ಅವಿರೋಧ ಆಯ್ಕೆಯಾಗಿದ್ದಾರೆ.

koppal-corporation-election-result
ಕೊಪ್ಪಳ ನಗರ ಸಭೆ ಚುನಾವಣೆ : ಕಾಂಗ್ರೆಸ್ ತೆಕ್ಕೆಗೆ ಅಧ್ಯಕ್ಷ, ಜೆಡಿಎಸ್ ತೆಕ್ಕೆಗೆ ಉಪಾಧ್ಯಕ್ಷ ಸ್ಥಾನ
author img

By

Published : Jun 2, 2022, 5:41 PM IST

ಕೊಪ್ಪಳ: ಕೊಪ್ಪಳ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ, ಕೊಪ್ಪಳ ನಗರಸಭೆಯ ಅಧ್ಯಕ್ಷರಾಗಿ ಕಾಂಗ್ರೆಸ್‌ ಪಕ್ಷದ ಶಿವಗಂಗಮ್ಮ ಭೂಮಕ್ಕನವರ್, ಉಪಾಧ್ಯಕ್ಷರಾಗಿ ಜೆಡಿಎಸ್ ನ ಆಯಿಷಾ ರುಬಿನಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಗರ ಸಭೆಯ ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನವು ಹಿಂದುಳಿದ ವರ್ಗದ ಮಹಿಳೆಗೆ ಮೀಸಲಾಗಿತ್ತು. 31 ಸದಸ್ಯ ಬಲದ ಕೊಪ್ಪಳ ನಗರಸಭೆಯಲ್ಲಿ 15 ಕಾಂಗ್ರೆಸ್, 10 ಬಿಜೆಪಿ , 2 ಜೆಡಿಎಸ್, ವೆಲ್ಫೇರ್ ಪಾರ್ಟಿಯ ಓರ್ವ ಸದಸ್ಯ ಹಾಗೂ ಮೂವರು ಪಕ್ಷೇತರ ಸದಸ್ಯರಿದ್ದರು.

ಕೊಪ್ಪಳ ನಗರ ಸಭೆ ಚುನಾವಣೆಯಲ್ಲಿ, ಕಾಂಗ್ರೆಸ್ ತೆಕ್ಕೆಗೆ ಅಧ್ಯಕ್ಷ, ಜೆಡಿಎಸ್ ತೆಕ್ಕೆಗೆ ಉಪಾಧ್ಯಕ್ಷ ಸ್ಥಾನ ಲಭಿಸಿದೆ.

ಕಾಂಗ್ರೆಸ್ ತನ್ನ 15 ಸದಸ್ಯರ ಜತೆಗೆ ಇಬ್ಬರು ಜೆಡಿಎಸ್, ಮೂವರು ಪಕ್ಷೇತರರು ಹಾಗೂ ಓರ್ವ ವೆಲ್ಫೇರ್ ಪಾರ್ಟಿಯ ಸದಸ್ಯನ ಬೆಂಬಲದೊಂದಿಗೆ ನಗರಸಭೆ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಇತ್ತ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜೊತೆಗೆ ತೆರೆದ ವಾಹನದಲ್ಲಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೆರವಣಿಗೆ ಮಾಡಲಾಯಿತು.

ಓದಿ : ಸೋನಿಯಾ ಗಾಂಧಿಗೆ ಕೋವಿಡ್ , ಕಾರ್ಯಕರ್ತರು ಆತಂಕ ಪಡುವ ಅಗತ್ಯವಿಲ್ಲ: ಸುರ್ಜೇವಾಲಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.